ಜಗತ್ತಿಗೆ ಯೋಗ ಪ್ರಾಣಾಯಾಮ ಭಾರತದ ಕೊಡುಗೆ: ರಾಕೇಶ್ ಭಟ್

Spread the love

ಮೈಸೂರು: ಯೋಗ ಮತ್ತು ಪ್ರಾಣಾಯಾಮವನ್ನ ಜಗತ್ತಿಗೆ ಭಾರತ ಕೊಡುಗೆ ನೀಡಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್ ತಿಳಿಸಿದರು.

ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಅವರು ಮಾತನಾಡಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅದರ ಪಾರಂಪರಿಕ ಜ್ಞಾನ ಹಾಗೂ ಆರೋಗ್ಯದತ್ತ ಜಾಗೃತಿ ಮೂಡಿಸುವ ಒಂದು ಪ್ರಯತ್ನವಾಗಿದೆ. ಯೋಗ ಎಂಬುದು ಕೇವಲ ವ್ಯಾಯಾಮವಲ್ಲ. ಇದು ದೇಹ, ಮನಸ್ಸು ಮತ್ತು ಆತ್ಮದ ಏಕತೆಯನ್ನು ಸಾಧಿಸುವ ಪವಿತ್ರ ಶಿಸ್ತಿನ ರೂಪವಾಗಿದೆ ಎಂದು ಬಣ್ಣಿಸಿದರು.

ಯೋಗದ ಮೂಲಕ ನಾವು ದೈನಂದಿನ ಒತ್ತಡವನ್ನು ನಿಭಾಯಿಸಬಹುದು, ಮನಸ್ಸು ಶಾಂತವಾಗಿರುತ್ತದೆ ಮತ್ತು ದೇಹ ಆರೋಗ್ಯವಾಗಿರುತ್ತದೆ. ಪ್ರತಿದಿನವೂ ಕನಿಷ್ಠ 20 ನಿಮಿಷ ಯೋಗ ಅಭ್ಯಾಸ ಮಾಡುವುದು ನಮ್ಮ ಆರೋಗ್ಯಕ್ಕೂ ಮತ್ತು ಜೀವನ ಶೈಲಿಗೂ ತುಂಬಾ ಸಹಕಾರಿ ಎಂದು ರಾಕೇಶ್ ಭಟ್ ಹೇಳಿದರು.

ರಾಮಕೃಷ್ಣ ಪರಮಹಂಸರ ಪ್ರತಿಮೆ ಇರುವ ಪ್ರೇರಣಾ ಶಕ್ತಿ ಹೊಂದಿರುವ ಸುಂದರ ವೃತ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಹೈ, ಅಂದರೆ ನಾವು ಸದೃಢವಾಗಿದ್ದರೆ ದೇಶವು ಸದೃಢ ಎಂಬ ಭಾವನೆಯಲ್ಲಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಸ್ಥ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿವಿಧ ಆಸನಗಳು ಹಾಗೂ ಪ್ರಾಣಾಯಾಮವನ್ನು ಯೋಗ ಗುರು ಪುರುಷೋತ್ತಮ್ ಅಗ್ನಿ‌ ಅವರು ಹೇಳಿ ಎಲ್ಲರಿಂದ ಮಾಡಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿ ಕಿರಣ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಹೆಚ್.ಜಿ.ರಾಜಮಣಿ, ಶಿವು ಪಟೇಲ್, ಬಿ.ಸಿ.ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ಎಸ್.ಟಿ. ಮೋರ್ಚಾ ನಗರ ಉಪಾಧ್ಯಕ್ಷ ಎಸ್.ತ್ಯಾಗರಾಜ್ ನಾಯಕ್, ಮಹಿಳಾ ಮೋರ್ಚಾ ನಗರ ಕಾರ್ಯದರ್ಶಿ ವಿಜಯ ಮಂಜುನಾಥ್, ಮಂಡಲದ ಕಾರ್ಯದರ್ಶಿಗಳಾದ ಶ್ರೀನಿವಾಸ ಪ್ರಸಾದ್, ಸೋಮಣ್ಣ, ರಾಮಕೃಷ್ಣ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಲಿಂಗಪ್ಪ, ಮುಖಂಡರಾದ ರಂಗೇಶ್, ಮಧು ಸೋಮಶೇಖರ್, ಚಂದ್ರಶೇಖರ ಸ್ವಾಮಿ, ರಾಘವೇಂದ್ರ, ಬಸವಣ್ಣ, ಪುಟ್ಟಮ್ಮಣ್ಣಿ, ಮಂಜುಳಾ, ರಮಾಭಾಯಿ, ಗೀತಾ ಮಹೇಶ್, ಹೇಮಲತಾ, ಸುಮಿತ್ರಾ, ರೇವಣ್ಣಸಿದ್ದಪ್ಪ, ಭೈರೇಗೌಡ, ಮಹೇಶ್, ತಿಮ್ಮೇಗೌಡ, ನಿಶಾಂತ್ ಪಟೇಲ್, ಪದ್ಮ ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗವಹಿದ್ದರು.