ಮಂಡ್ಯ: ಪ್ರಯಾಣಿಕರನ್ನ ಗ್ರಾಮಕ್ಕೆ ಕರೆದೊಯ್ಯದೆ ಮಾರ್ಗ ಮಧ್ಯದಲ್ಲೆ ಬಸ್ ನಿಲ್ಲಿಸಿ ಉದ್ಧಟತನ ಪ್ರದರ್ಶಿಸಿದ ಕೆಎಸ್ ಆರ್ ಟಿಸಿ ನಿರ್ವಾಹಕ,ಚಾಲಕನ ವಿರುದ್ಧ
ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು, ಐಚನಹಳ್ಳಿ ಬಳಿ ಈ ಪ್ರಸಂಗ ನಡೆದಿದೆ.
ಕೆ.ಆರ್.ಪೇಟೆಯಿಂದ ಐಚನಹಳ್ಳಿಗೆ ತೆರಳುತ್ತಿದ್ದ ಬಸ್ ನಲ್ಲಿ ಕೆಲವೇ ಮಂದಿ ಪ್ರಯಾಣಿಕರಿದ್ದರು.
ಕೆಲವೇ ಮಂದಿ ತಾನೆ ಎಂದು ಕೊಂಡು ಗ್ರಾಮಕ್ಕೆ ಹೋಗಲು ಚಾಲಕ ನಿರಾಕರಿಸಿದ್ದಾರೆ,ಇಷ್ಟು ಜನಕ್ಕೆ ನಿಮ್ಮೂರಿಗೆ ಹೋಗಲು ಆಗಲ್ಲ, ಇಲ್ಲಿಂದ ನಡೆದುಕೊಂಡು ಹೋಗಿ ಎಂದು ಅವಾಜ್ ಹಾಕಿ,ಬೂಕನಕೆರೆಯಲ್ಲಿಯೇ ಬಸ್ ನಿಲ್ಲಿಸಿ, ಪ್ರಯಾಣಿಕರಿಗೆ ಇಳಿಯುವಂತೆ ಆದೇಶಿಸಿದ್ದಾನೆ.
ಈ ವೇಳೆ ಪ್ರಯಾಣಿಕರು ಗ್ರಾಮಕ್ಕೆ ಕರೆದೊಯ್ಯುವಂತೆ ಪಟ್ಟು ಹಿಡಿದಿದ್ದಾರೆ.
ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದೆ ಪ್ರಯಾಣಿಕರಿಗೆ ಅವಾಚ್ಯ ಪದ ಬಳಸಿ ನಿಂದಿಸಿ, ಮರಳಿ ಕೆ.ಆರ್.ಪೇಟೆಯತ್ತ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ.
ಮಾಹಿತಿ ತಿಳಿದ ಐಚನಹಳ್ಳಿ ಗ್ರಾಮಸ್ಥರು ಬೊಮ್ಮೇಗೌಡನ ಕೊಪ್ಪಲು ಬಳಿ ಬಸ್ ತಡೆದು ಚಾಲಕ,ನಿರ್ವಾಹಕನಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಪ್ರಯಾಣಿಕರ ಗಲಾಟೆ ಜೋರಾಗುತ್ತಿದ್ದಂತೆ ಡ್ರೈವರ್ ಮನು ಹಾಗೂ ಕಂಡಕ್ಟರ್ ಪ್ರಭಾಕರ್ ಓಡಿ ಹೋಗಿದ್ದಾರೆ.
ಬಸ್ ಮುಂದೆ ನಿಂತು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಲ್ಲದೆ
ಸ್ಥಳಕ್ಕೆ ಬಂದ ಕೆ ಎಸ್ ಆರ್ ಟಿ ಸಿ ಅಧಿಕಾರಿಗೂ ಚಳಿ ಬಿಡಿಸಿದ್ದಾರೆ.
ಉದ್ದಟತನ ತೋರಿದ ವಿರುದ್ಧ ಡ್ರೈವರ್ ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.