ಕಲಾವಿದ ಮಹೇಶ ಎಸ್ ತಳವಾರ ಗೆ ಕ ಜಾ ಪ ದಶಮಾನೋತ್ಸವ ಗೌರವ ಪ್ರಶಸ್ತಿ

ಬೆಂಗಳೂರು: ಜೂನ್ 25 ರಂದು ನಡೆಯುವ ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರ ಘಟಕ ಪ್ರಥಮ ರಾಜ್ಯ ಕನ್ನಡ ಜಾನಪದ ಸಮ್ಮೇಳನ ಜಾನಪದ ಗೌರವ ಪ್ರಶಸ್ತಿಗೆ ದೊಡ್ಡಾಟ ಕಲಾವಿದ ಮಹೇಶ ಎಸ್ ತಳವಾರ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಮ್ಮೇಳನದಲ್ಲಿ ೬೦ ಗಣ್ಯರಿಗೆ,ಜಾನಪದ ವಿದ್ವಾಂಸರಿಗೆ ಜಿ.ಶಂ.ಪ ರಾಜ್ಯ ಪ್ರಶಸ್ತಿ, ಮಧುರ ಚೆನ್ನ ರಾಜ್ಯ ಪ್ರಶಸ್ತಿ ಮತ್ತು ನಾಡೋಜ ಎಸ್ ಕೆ ಕರೀಂ ಖಾನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಹಾಗೆಯೇ ೪೫ ಜನ ಕಲಾವಿದರಿಗೆ ದಶಮಾನೋತ್ಸವ ಜಾನಪದ ಗೌರವ ಪ್ರಶಸ್ತಿ ಮತ್ತು ೧೦೧ ಜನ ನಾಡಿನ ಯುವ ಕಲಾವಿದರಿಗೆ ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು,ಜಾನಪದ ಗೋಷ್ಠಿ, ಮಹಿಳಾ ಗೋಷ್ಠಿ,ಬಹಿರಂಗ ಸಭೆ ಮತ್ತು ವಿಚಾರ ಸಂಕಿರಣಗಳು ನಡೆಯಲಿದ್ದು ಗಣ್ಯರು,ಜಾನಪದ ವಿದ್ವಾಂಸರು ಈ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ.