ಹರಿಯಾಣ: ಹರ್ಯಾಣದ ರೂಪದರ್ಶಿ ಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಅವರ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದೆ.
ಹರಿಯಾಣದ ರೂಪದರ್ಶಿ ಶೀತಲ್ ಅವರ ಮೃತದೇಹ ಸೋನಿಪತ್ ನ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದೆ.
ಈಕೆ ಯಾವುದೋ ಕೆಲಸದ ಮೇಲೆ ಸೋನಿಪತ್ ಗೆ ಬಂದಿದ್ದರು.ಆದರೆ ಎರಡು ದಿನಗಳಿಂದ ನಾಪತ್ತೆಯಾಗಿದ್ದರು.ಶೀತಲ್ ಹೆಸರು ಸಿಮ್ಮಿ ಚೌಧರಿ.
ಇದೀಗ ಅವರು ಶವವಾಗಿ ಪತ್ತೆಯಾಗಿದ್ದಾರೆ. ಸೋನಿಪತ್ನ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದ್ದು ಈಕೆಯ ಹತ್ಯೆಗೆ ಕಾರಣ ಗೊತ್ತಾಗಿಲ್ಲ.
ರೂಪದರ್ಶಿಯಾಗಿ ವೃತ್ತಿ ಮಾಡುತ್ತಿದ್ದ ಶೀತಲ್ ಸಂಗೀತ ವಿಡಿಯೋಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಪಾಣಿಪತ್ ನಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಶೀತಲ್, ಜೂನ್ 14 ರಂದು
ಆಲ್ಬಮ್ ಚಿತ್ರೀಕರಣಕ್ಕಾಗಿ ಪಾಣಿಪತ್ ನ ಅಹರ್ ಗ್ರಾಮಕ್ಕೆ ತೆರಳಿದ್ದರು.
ಆದರೆ ಮನೆಗೆ ವಾಪಸಾಗಿರಲಿಲ್ಲ.
ನಂತರ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸರು ರೂಪದರ್ಶಿಗಾಗಿ ಹುಡುಕುತ್ತಿದ್ದರು. ಆದರೆ, ಕಾಣೆಯಾಗಿದ್ದ ಶೀತಲ್ ಮೃತದೇಹ ಸೋನಿಪತ್ ಸಮೀಪದ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದೆ. ಅವರ ಕೈ ಮತ್ತು ಎದೆಯ ಮೇಲಿನ ಹಚ್ಚೆಗಳ ಆಧಾರದ ಮೇಲೆ ಅಧಿಕಾರಿಗಳು ಮೃತದೇಹವನ್ನು ಗುರುತಿಸಿದ್ದಾರೆ
ಭಾನುವಾರ ಶೀತಲ್ ಗೆಳೆಯ ಸುನೀಲ್ ಇದ್ದ ಕಾರು ಕಾಲುವೆಯಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿದ್ದ ಸುನೀಲ್ ನನ್ನು ರಕ್ಷಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ.ಈತನೇ ಶೀತಲ್ ನನ್ನು ಹತ್ಯೆ ಮಾಡಿರಬಹುದೆಂದು ಆಕೆಯ ಕುಟುಂಬದವರು ಶಂಕಿಸಿದ್ದಾರೆ.