ಮೈಸೂರು: ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕವಾದ ಶಿಕ್ಷಕರಿದ್ದು ಇಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಾರು ಚಾಲಕರ ಮಾಲೀಕರ ಒಕ್ಕೂಟದ ಅಧ್ಯಕ್ಷ ರವಿ ಹೇಳಿದರು.

ಮೈಸೂರಿನ ಚಾಮುಂಡಿಪುರಂನಲ್ಲಿರುವ ಬಾಲಬೋದಿನಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್ಸ್ ವಿತರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು ಎಂದು ತಿಳಿಹೇಳಿದರು.

ದಾನಿಗಳು ಹಾಗೂ ಸ್ನೇಹಿತರ ಸಹಕಾರದಿಂದ 20 ವರ್ಷದಿಂದ ಮೈಸೂರು ನಗರದ 11 ಹಿಂದುಳಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್ನು, ಬ್ಯಾಗು ಹಾಗೂ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ನೀಡುತ್ತಾ ಬಂದಿದ್ದು ಈ ವರ್ಷ ಸಹ ಆ ಕಾರ್ಯವನ್ನು ಮುಂದುವರಿಸುತ್ತಿದ್ದೇವೆ, ಮಕ್ಕಳು ಶ್ರದ್ದೆಯಿಂದ ಓದು ಬರಹದಲ್ಲಿ ತೊಡಗಬೇಕು,ಶಿಕ್ಷಣ ಮಾತ್ರ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಧನವಾಗಿದೆ, ದಾನಿಗಳು ನೀಡಿದ ಸಾಮಗ್ರಿಗಳು ಉಪಯೋಗವಾಗಲಿ ಎಂದು ಸಲಹೆ ನೀಡಿದರು.

ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ,ಸಮಾಜ ಸೇವೆಯಲ್ಲಿ ತೊಡಗಿದ ರವಿ ಅವರ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು, ಇವರ ಸ್ನೇಹ ಒಕ್ಕೂಟ ಬಡ ಮಕ್ಕಳ ಓದಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಾರು ಚಾಲಕರ ಮಾಲೀಕರ ಒಕ್ಕೂಟದ ಗೌರವಾಧ್ಯಕ್ಷ ಮಧು, ಹೇಮಂತ್,ರವಿಚಂದ್ರ, ಕನಕಮೂರ್ತಿ,
ಶಾಲೆಯ ಮುಖ್ಯ ಶಿಕ್ಷಕರಾದ ಜಯಂತಿ,ಸಹ ಶಿಕ್ಷಕಿ ಲತಾ ಕುಮಾರಿ, ಮೊಸಿನ್ ತಾಜ್, ಲೀಲಾವತಿ ಹಾಗೂ ಒಕ್ಕೂಟದ ಸಂಚಾಲಕರು ಹಾಜರಿದ್ದರು.
