ಆಷಾಢ;ಬೆಟ್ಟದಲ್ಲಿ ಸ್ವಯಂ ಘೋಷಿತ ಬೌನ್ಸರ್ ಹಾವಳಿ ತಪ್ಪಿಸಿ:ಸಂದೇಶ್

ಮೈಸೂರು: ಆಷಾಢ ಪ್ರಾರಂಭವಾಗುತ್ತಿದ್ದಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ರೀತಿ ಹಬ್ಬದ ವಾತವರಣ ನಿರ್ಮಾಣವಾಗಿ ಬಿಡುತ್ತದೆ.

ಆಷಾಡ ಮಾಸ ಆರಂಭವಾಗುತ್ತಿದ್ದಂತೆ
ನಾಡ ದೇವತೆಗೆ ಮೈಸೂರಿನ ಗಲ್ಲಿಗಳು, ಮುಖ್ಯ ರಸ್ತೆಗಳಲ್ಲಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಮಾಡಿ ಪ್ರಸಾದ ವಿನಿಯೋಗ ಮಾಡಿ ಸಂಭ್ರಮಿಸುತ್ತಾರೆ.

ಅಷ್ಟರ ಮಟ್ಟಿಗೆ ಯುವಕರಲ್ಲಿ ತಾಯಿಯ ಬಗ್ಗೆ ಬಗ್ಗೆ ಭಕ್ತಿ ಭಾವ ತುಂಬಿರುತ್ತದೆ.

ಇನ್ನು ಚಾಮುಂಡಿ ಬೆಟ್ಟದಲ್ಲಿ ಪ್ರತಿ ಶುಕ್ರವಾರ ತಾಯಿಗೆ ವಿಶೇಷ ಅಲಂಕಾರ ಪೂಜೆ ನೆರವೇರುತ್ತದೆ.ಅಂದಿನ ದರ್ಶನಕ್ಕೆ ಜನ ಜಾತ್ರೆ ನೆರೆದಿರುತ್ತದೆ.

ವಯಸ್ಸಾದ ಹಿರಿಯರಿಂದ ಸಣ್ಣ ಮಕ್ಕಳು ಸಹ ಶುಕ್ರವಾರದ ವಿಶೇಷ ಅಲಂಕಾರದಿಂದ ಕೂಡಿದ ತಾಯಿಯ ದರ್ಶನಕ್ಕಾಗಿ ಬೆಟ್ಟಕ್ಕೆ ಆಗಮಿಸುತ್ತಾರೆ.

ಆ ಸಮಯದಲ್ಲಂತು ಎಲ್ಲರು ಶೂರರೆ ಆಗಿಬಿಡುತ್ತಾರೆ.ದರ್ಶನ ಮಾಡಲು ಪೈಪೋಟಿಗೆ ಇಳಿಯುತ್ತಾರೆ, ಎಲ್ಲಾ ರಾಜಕೀಯ ಪಕ್ಷದ ಜನಪ್ರತಿನಿಧಿಗಳ ಹಿಂಬಾಲಕರು, ಮುಖಂಡರುಗಳು ಕಾರ್ಯಕರ್ತರು ಅಂದಿನ ಮಟ್ಟಕ್ಕೆ ಗಣ್ಯವ್ಯಕ್ತಿಗಳು.

ಶುಕ್ರವಾರ ತಾಯಿಯ ದರ್ಶನ ಪಡೆಯೋದು ಎಲ್ಲರಿಗು ಪುಣ್ಯ ಹಾಗೂ ಹೆಮ್ಮೆಯ ವಿಷಯ.ಆದರೆ ಈ ಗಣ್ಯಾತಿಗಣ್ಯರ ನಡುವೆ ಜನಸಾಮಾನ್ಯರ ಪಾಡು ಹೇಳಲಸಾಧ್ಯ ಎಂದು ಹಿಂದು ಸಂಘಟನೆ ಒಕ್ಕೂಟದ ಮುಖಂಡರಾದ ಸಂದೇಶ್ ಸರ್ಕಾರದ ಗಮನ ಸೆಳೆದಿದ್ದಾರೆ.

ಮುಂಜಾನೆ 2-3ಗಂಟೆಗೆಲ್ಲಾ‌ ಸರತಿ ಸಾಲಿನಲ್ಲಿ ಗಟ್ಟಲೆ ಧರ್ಮ ದರ್ಶನದ ಕ್ಯೂ ನಲ್ಲಿ ನಿಂತು ದೇವಸ್ಥಾನದ ಒಳಗೆ ಪ್ರವೇಶಿಸಿದರೆ ಬೌನ್ಸರ್ ಗಳ ರೀತಿ ವರ್ತಿಸುವವರ ಕಾಟ ಶುರುವಾಗುತ್ತದೆ.

ಸ್ವಯಂ ಸೇವಕ ರೆಂದು ತಮಗೆ ತಾವೇ ಬಿರುದು ಕೊಟ್ಟುಕೊಂಡು ದರ್ಶನಕ್ಕೆ ಬರುವ ಭಕ್ತರನ್ನು ಮನಸೋ ಇಚ್ಛೆ ಎಳೆದು ಹಾಕತ್ತಾರೆ.

ಹಿರಿಯರು, ಮಹಿಳೆಯರು, ಎನ್ನುವ ಯಾವುದೇ ಮುಲಾಜಿಲ್ಲದೆ ಕೆಲವು
ರೌಡಿಗಳಂತೆ ವರ್ತಿಸುವವರ ನಡವಳಿಕೆ ಭಯ ಹುಟ್ಟಿಸುತದೆ ಎಂದು ಹಿಂದು ಸಂಘಟನೆ ಒಕ್ಕೂಟದ ಮುಖಂಡರಾದ ಸಂದೇಶ್ ತಿಳಿಸಿದ್ದಾರೆ.

ಪ್ರಶ್ನೆ ಮಾಡಿದರೆ ಹೊರಗೆ ಬಾ ನೋಡಿಕೊಳುತ್ತೇನೆ ಎನ್ನುವ ವರ್ತನೆ ಬೇರೆ.

ಆಡಳಿತ ಮಂಡಳಿ ಮತ್ತು ಮಹಾನಗರ ಪಾಲಿಕೆ,ಪೋಲಿಸ್ ಇಲಾಖೆ ಬೌನ್ಸರ್ ಗಳಂತೆ ವರ್ತಿಸುವ ಇಂತಹ ವ್ಯಕ್ತಿಗಳ ಹಾವಳಿ ತಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಇವರ ಬಗ್ಗೆ ನಿಗ ವಹಿಸಿ, ಆವರಣದ ಒಳಗೆ ಇಲಾಖೆಯ ಅನುಭವ ವಿರುವ
ಸರ್ಕಾರಿ ಅಧಿಕೃತ ಸೌಜನ್ಯದಿಂದ ವರ್ತಿಸುವ
ವ್ಯಕ್ತಿಗಳಿಗೆ ಅಥವಾ ಗಾರ್ಡ್ ಗಳನ್ನು
ಮಾತ್ರ ನಿಯೋಜಿಸಬೇಕು ಹಾಗೆ ಮಾಡಿದಲ್ಲಿ ಮಾತ್ರ ಜನಸಾಮಾನ್ಯರಿಗೆ ಚಾಮುಂಡೇಶ್ವರಿ ದರ್ಶನವಾಗುತ್ತದೆ, ಇಲ್ಲದಿದ್ದಲ್ಲಿ ಎಲ್ಲವೂ ವ್ಯಾಪರೀಕರಣ ವಾಗುತ್ತದೆ ಎಂದು
ಸಂದೇಶ್ ತಿಳಿಸಿದ್ದಾರೆ.