ಯಾದಗಿರಿ: ಗುರುವಾರ ಸಂಜೆ ಸುರಿದ ಮಳೆ ವೇಳೆ ಸಿಡಿಲು ಬಡಿದು ಕುರಿಗಾಹಿ ಯುವಕನ ಮೃತಪಟ್ಟ ಘಟನೆ ಸುರಪುರದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಪೇಠ ಅಮ್ಮಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಳ ಅಮ್ಮಾಪೂರ ಗ್ರಾಮದ ಕುರಿಗಾಹಿ ಯುವಕ ಮರೆಪ್ಪ ತಂ/ಅಯ್ಯಪ್ಪ ದೇವಡಿ (21) ಮೃತಪಟ್ಟಿದ್ದಾನೆಂದು ಸ್ಥಳೀಯರು ತಿಳಿಸಿದ್ದಾರೆ.
ಸುರಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,
ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.