ಹೈದರಾಬಾದ್: ಬಹು ಭಾಷೆಗಳ ಚಿತ್ರಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಖ್ಯಾತ ಹಿನ್ನೆಲೆ ಮಂಗ್ಲಿಗೆ ಸಂಕಷ್ಟ ಎದುರಾಗಿದೆ.
ಅದೂ ಮಂಗ್ಲಿಯ ಬರ್ತ್ಡೇ ಪಾರ್ಟಿಯಂದೇ ಸಂಕಷ್ಟ ಎದುರಾಗಿರುವುದು ದುರ್ದೈವವೇ ಸರಿ.
ಮಂಗ್ಲಿಯ ಬರ್ತಡೆ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದೆ.
ಹೈದರಾಬಾದ್ ಪೊಲೀಸರು ಮಂಗ್ಲಿ ಮತ್ತು ಪಾರ್ಟಿಯಲ್ಲಿದ್ದ ಇತರೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಂಗ್ಲಿಯ ಹುಟ್ಟುಹಬ್ಬ ನಿನ್ನೆ ತಡರಾತ್ರಿವರೆಗೂ ಸಾಗಿತ್ತು, ಪಾರ್ಟಿಯ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ಪತ್ತೆಯಾಗಿದೆ.
ಹೈದರಾಬಾದ್ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್ನಲ್ಲಿ ಗಾಯಕಿ ಮಂಗ್ಲಿಯ ಬರ್ತ್ಡೇ ಪಾರ್ಟಿ ಬಲು ಜೋರಾಗಿ ನಡೆದಿತ್ತು. ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದು, ಮಾದಕ ವಸ್ತು ಸೇವಿಸಿರುವುದು ಖಚಿತ ವಾಗಿರುವುದರಿಂದ ಪ್ರಕರಣ ದಾಖಲಿಸಿದ್ದಾರೆ.
ಹೈದರಾಬಾದ್ ಪೊಲೀಸರ ಮಾದಕ ವಸ್ತು ನಿಗ್ರಹ ದಳದ ಸದಸ್ಯರು ದಾಳಿ ನಡೆಸಿದ್ದು, ಈ ವೇಳೆ ಪಾರ್ಟಿಯಲ್ಲಿ ಹಾಜರಿದ್ದವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು,ಆ ಪೈಕಿ ಒಂಬತ್ತು ಮಂದಿ ಮಾದಕ ವಸ್ತು ಸೇವಿಸಿರುವುದು ಖಚಿತವಾಗಿದೆ.ಅವರೆಲ್ಲ ಗಾಂಜಾ ಸೇವನೆ ಮಾಡಿದ್ದರು.
ಮಂಗ್ಲಿಯ ಪಾರ್ಟಿಯಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಕೆಲ ವಿದೇಶಿ ಮದ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗ್ಲಿ ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಪೊಲೀಸರಿಗೇ ಧಮ್ಕಿ ಹಾಕಿದ್ದಾರೆ.