ಮೈಸೂರು: ಅತ್ತೆ ಮನೆಗೆ ಹೋಗಿದ್ದ ವೇಳೆ ಇಂಜಿನಿಯರ್ ಮನೆಯಲ್ಲಿ 9 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮೈಸೂರಿನ ವಿಜಯನಗರದ 4 ನೇ ಹಂತದಲ್ಲಿ ನಡೆದಿದೆ.
156 ಗ್ರಾಂ ಚಿನ್ನಾಭರಣ 2 ಕೆಜಿ ಬೆಳ್ಳಿ ಪದಾರ್ಥ ಸೇರಿದಂತೆ 9 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.
ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಲಕ್ಷ್ಮಿನಾರಾಯಣ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಪತ್ನಿ ಗೌರಿ ಅವರು ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಗೌರಿ ಅವರೊಂದಿಗೆ ಆಕೆಯ ತವರು ಮನೆಗೆ ಲಕ್ಷ್ಮಿನಾರಾಯಣ ಹೋಗಿದ್ದರು.
ದಂಪತಿ ಹಿಂದಿರುಗಿದಾಗ ಅವರ ಮನೆಯ ಬೀಗ ಮುರಿದಿತ್ತು.ಒಳಗೆ ಬಂದು ಪರಿಶೀಲಿಸಿದಾಗ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳು ಕಾಣೆಯಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಲಕ್ಷ್ಮಿನಾರಾಯಣ ಅವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
