ಸಂಘಟನಾ ಕ್ಷೇತ್ರದ ಸಾಧನೆ:ವಿಕ್ರಂ ಅಯ್ಯಂಗಾರ್ ಗೆ ಸನ್ಮಾನ

Spread the love

ಮೈಸೂರು: ಎನ್ ಎಂ ನವೀನ್ ಕುಮಾರ್ ವಿಪ್ರ ಮಿತ್ರ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಕಲ್ಯಾಣ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದಲ್ಲಿ ಸಂಘಟನಾ ಕ್ಷೇತ್ರದಿಂದ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಹಾಗೂ ಮೂಡ ಮಾಜಿ ಅಧ್ಯಕ್ಷರಾದ ಕೆ ಆರ್ ಮೋಹನ್ ಕುಮಾರ್, ಅಖಿಲ ಕರ್ನಾಟಕ ಬ್ರಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಎನ್ ಎಂ ನವೀನ್ ಕುಮಾರ್‌ ಅವರು ವಿಕ್ರಮ್ ಅಯ್ಯಂಗಾರ್ ಅವರನ್ನು ಸನ್ಮಾನಿಸಿದರು.

ಈ ವೇಳೆ ಅಖಿಲ ಕರ್ನಾಟಕ ಬ್ರಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜ್ ಕುಮಾರ್,ವಕೀಲರಾದ ರವೀಂದ್ರ, ಸಿ ಎಸ್ ಚಂದ್ರಶೇಖರ್, ಪ್ರವೀಣ್, ಶ್ರೀಕಾಂತ್ ಕಶ್ಯಪ್ ಮತ್ತಿತರರು ಹಾಜರಿದ್ದರು.