ಬಸ್ಸು, ಕಾರು ನಡುವೆ ಭೀಕರ ಅಪಘಾತ:ಕಾರು ಚಾಲಕ ದುರ್ಮರಣ

(ವರದಿ: ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ: ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಬಸ್ಸು ಹಾಗೂ ಕಾರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಾಲ್ಲೂಕಿನ ಧನಗೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ತಮಿಳುನಾಡಿನ ಕೊಯಮತ್ತೂರು ನಿವಾಸಿ ನಿವೃತ್ತ ಬ್ಯಾಂಕ್ ನೌಕರ ಕೆ. ರವಿಕೃಷ್ಣನ್ ಎಂಬುವರ ಪುತ್ರ ಆರ್. ವಿಘ್ನೇಶ್ (27) ಮೃತ ಕಾರು ಚಾಲಕ.

ರವಿಕೃಷ್ಟನ್ ರವರಿಗೆ ಇಬ್ಬರು ಮಕ್ಕಳು ಹಿರಿಯ ಮಗ ವಿಘ್ನೇಶ್ ಬೆಂಗಳೂರಿನಲ್ಲಿರುವ ಎಕ್ಸ್ ಫೋನೆಟ್ ಎನರ್ಜಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ನಾಳೆಯಿಂದ ಎರಡು ದಿನಗಳ ಕಾಲ ರಜೆ ಇದ್ದುದ್ದರಿಂದ ಇಂದು ಬೆಳಿಗ್ಗೆ ಬೆಂಗಳೂರಿನಿಂದ ಕೊಳ್ಳೇಗಾಲದ ಮೂಲಕ ತಮಿಳುನಾಡಿನ ಕೊಯಮತ್ತೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಬೆಳಿಗ್ಗೆ ಸುಮಾರು 10.35ರ ಸಮಯದಲ್ಲಿ ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಬಸ್ ಪ್ರಯಾಣಕರನ್ನು ತುಂಬಿಕೊಂಡು ಬೆಂಗಳೂರಿನತ್ತ ಹೋರಾಟಿತ್ತು.

ಈ ವೇಳೆ ಧನಗೆರೆ ಗ್ರಾಮದ ಬಳಿ ಎದುರಿನಿಂದ ಬಂದ ವಿಜ್ಞೇಶ್ ಅವರ ಕಾರು ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಹಾಗಿದೆ. ಚಾಲಕ ವಿಘ್ನೇಶ್
ಸ್ಥಳದಲ್ಲಿ ಸಾವನ್ನಪ್ಪಿದರೆ ಬಸ್ ಚಾಲಕ ಗಾಯಗೊಂಡಿದ್ದು ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಚಾಮರಾಜನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ಸಂಬಂಧ ಮೃತನ ತಂದೆ ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿನ ವೈದ್ಯರಿಂದ ಪಂಚನಾಮೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಿದರು.