ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ

Spread the love

ಮೈಸೂರು: ನಾಲ್ವಡಿ ಪ್ರಶಸ್ತಿ ವಿಚಾರವಾಗಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಕಮಿಟಿ ಸದಸ್ಯರು ಕನ್ನಡ ಹೋರಾಟಗಾರರ ನ್ನು ಕಡೆಗಣಿಸಿದ್ದಾರೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.

ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಹಾಗೂ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ವಿಷಯದಲ್ಲಿ ಸಾಧನೆ ಮಾಡಿ ಕೊಡುಗೆ ನೀಡಿ ಹೋರಾಟ ಮಾಡಿರುವ ವರಿಗೆ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.

ಆದರೆ ನಿನ್ನೆ ನಡೆದ ೨೦೨೫ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿವಿಧ ಜಿಲ್ಲೆಗಳ ಇಪ್ಪತ್ತು ಜನರಿಗೆ ರಾಜ್ಯ ಮಟ್ಟದ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆದರೆ ಯಾವೊಬ್ಬ ಕನ್ನಡ ಹೋರಾಟಗಾರರಿಗೆ ಈಬಾರಿ ಪ್ರಶಸ್ತಿ ನೀಡದೆ ಕನ್ನಡ ಹೋರಾಟಗಾರರನ್ನು ಕಡೆಗಣಿಸಿರುವುದು ಅಕ್ಷಮ್ಯ ಅಪರಾಧ ಕನ್ನಡ ಹೋರಾಟಗಾರರಿಗೆ ಮಾಡಿದ ಅಪಮಾನ ಎಂದು ತೇಜಸ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಜಿಲ್ಲೆಯ ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿದ್ದಾರೆ ಈ ಜಿಲ್ಲೆಗಳಲ್ಲಿ ಒಬ್ಬರು ಕೂಡ ಹೋರಾಟಗಾರರು ನಿಮ್ಮ ಕಣ್ಣಿಗೆ ಕಾಣಲಿಲ್ಲ ವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತೇಜಸ್ವಿ ಪ್ರಶ್ನೆ ಮಾಡಿದ್ದಾರೆ.

ಇದು ಕನ್ನಡಪರ ಹೋರಾಟಗಾರರಿಗೆ ಮಾಡಿದ ಅಪಮಾನ. ಕೂಡಲೇ ಮೈಸೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಅವರಿಗೆ ತೇಜಸ್ವಿ ಮನವಿ ಮಾಡಿದ್ದಾರೆ.

ಈ ಕುರಿತು ತಂಗಡಗಿ ಅವರಿಗೆ ಪತ್ರ ಬರೆಯುವುದಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಏಳು ಜನರಿಗೆ ಸಮಾಜ ಸೇವೆ ಎಂದು ಪ್ರಶಸ್ತಿ ನೀಡಿದ್ದೀರಿ ಇದರಲ್ಲಿ ಒಬ್ಬರಿಗಾದರು ಕನ್ನಡ ಹೋರಾಟಗಾರರಿಗೆ ನೀಡ ಬಹುದಾಗಿತ್ತು. ಕನ್ನಡ ಹೋರಾಟಗಾರರನ್ನು ಕಡೆಗಣಿಸಿರುವುದು ಏಕೆ ಎಂಬುದನ್ನು ಬಹಿರಂಗವಾಗಿ ಹೇಳಿಕೆ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತೇಜಸ್ವಿ ಆಗ್ರಹಿಸಿದ್ದಾರೆ.

ಕಮಿಟಿಯ ಸದಸ್ಯರುಗಳಾದರು ಸಹಾಯಕ ನಿರ್ದೇಶಕರಿಗೆ ಒಬ್ಬ ಕನ್ನಡ ಹೋರಾಟಗಾರರಿಗಾದರೂ ನಾಲ್ವಡಿ ಪ್ರಶಸ್ತಿಯನ್ನು ನೀಡಬೇಕೆಂದು ತಿಳಿಸಬೇಕಿತ್ತು ಯಾತಕ್ಕಾಗಿ ತಿಳಿಸಲಿಲ್ಲ ಎಂದು ಪ್ರಶ್ನಿಸಿ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಈ ಕಮಿಟಿಯನ್ನು ವಜಾಗೊಳಿಸಿ ಹೊಸ ಕಮಿಟಿ ರಚಿಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಹೋರಾಟಗಾರರ ಕಡೆಗಣನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರೇ ನೇರ ಹೊಣೆ,ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈಬಾರಿಯ ನಾಲ್ವಡಿ ಪ್ರಶಸ್ತಿ ಯಲ್ಲಿ ಕನ್ನಡ ಹೋರಾಟಗಾರರನ್ನು ಕಡೆಗಣಿಸಿರುವುದಕ್ಕೆ ದಿಕ್ಕಾರವಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಖಂಡಿಸಿದ್ದಾರೆ.