ಮೈಸೂರು: ಕರ್ನಾಟಕ ಹಿತರಕ್ಷಣ ವೇದಿಕೆ ವತಿಯಿಂದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜಯಂತಿ ಪ್ರಯುಕ್ತ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಲಾಯಿತು.
ಮೈಸೂರಿನ ಹೃದಯ ಭಾಗ ಡಿ ದೇವರಾಜ ಅರಸು ರಸ್ತೆಯಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಪ್ರಯುಕ್ತ ಮೈಸೂರು ಪಾಕ್ ಅನ್ನು ಸಾರ್ವಜನಿಕರಿಗೆ ಕೊಡುವ ಮುಖಾಂತರ ವಿಶೇಷವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ವಿನಯ್ ಕುಮಾರ್ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮುಖಂಡರಾದ ರವಿಚಂದ್ರ,ಗುರುರಾಜ್ ಶೆಟ್ಟಿ ,ಪ್ರಮೋದ್ ಗೌಡ ,ಉಮೇಶ್ ,ನಿತಿನ್ ,ನಜರ್ಬಾದ್ ಲೋಕೇಶ್ ,ಬೆಳಕು ಮಂಜುನಾಥ್ , ಕಣ್ಣನ್,ಹರೀಶ್ ಗೌಡ ,ಯತೀಶ್ ಬಾಬು, ಮಂಜುನಾಥ್,ಮೋಹನ್ ,ಸಂತೋಷ್ ,ಪ್ರಶಾಂತ್ ಮತ್ತಿತರರು ಹಾಜರಿದ್ದರು.