ಕುಟುಂಬ ಬಾಂಧವ್ಯದ ಮೌಲ್ಯವನ್ನು ಯುವಜನತೆ ಅರ್ಥಮಾಡಿಕೊಳ್ಳಿ:ಪ್ರೊ.ಪದ್ಮ

Spread the love

ಮೈಸೂರು: ಪೋಷಕರ ಮೇಲಿನ ಪ್ರೀತಿ, ಸಾಮರಸ್ಯ ಮತ್ತು ಕುಟುಂಬ ಬಾಂಧವ್ಯದ ಮೌಲ್ಯವನ್ನು ಇಂದಿನ ಯುವಜನತೆ ಅರ್ಥಮಾಡಿಕೊಳ್ಳಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಕರೆ ನೀಡಿದರು.

ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎನ್.ಉಷಾರಾಣಿ, ಅವರ ಮಾತೃಶ್ರೀ ದಿ. ಬಿ.ಎ.ಸೌಮ್ಯನಾಯಕಿ ಸ್ಮರಣಾರ್ಥ ಆಯೋಜಿಸಿದ್ದ ವಿಶಿಷ್ಟ ಮತ್ತು ಅರ್ಥಪೂರ್ಣ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರೊ.ಪದ್ಮಾ ಶೇಖರ್, ಹಿರಿಯ ಸಮಾಜಶಾಸ್ತ್ರಜ್ಞೆ ಪ್ರೊ.ಆರ್.ಇಂದಿರಾ ಹಾಗೂ ಪತ್ರಕರ್ತ ಈಶ್ವರ ದೈತೋಟ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ಪದ್ಮಾ ಶೇಖರ್ ಅವರು,ಕುಟುಂಬದಲ್ಲಿನ ಪ್ರೀತಿ ಮತ್ತು ಜೀವನೋತ್ಸಹ ಬದುಕಿಗೆ ಸುಗಮ. ಪ್ರೀತಿಯೇ ಕುಟುಂಬವನ್ನು ಬಂಧಿಸುವ ಅಂಶವಾದ್ದರಿಂದ ಕಳೆದ 47 ವರ್ಷಗಳಿಂದ ತಾವು ಸಂತೋಷದಿಂದ ದಾಂಪತ್ಯ ಜೀವನ ನಡೆಸುತ್ತಿರುವುದಾಗಿ ತಿಳಿಸಿದರು.

ಪ್ರೊ.ಆರ್.ಇಂದಿರಾ ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳ ಮತ್ತು ಕಾಲೇಜು ಪರಿಸರದ ನಡುವೆ ಭಾವನಾತ್ಮಕ ಸಂಬಂಧದ ಕೊರತೆಯಿರುವುದು ಗಂಭೀರ ಸವಾಲನ್ನ ಒಡ್ಡಿದೆ ಎಂದು ಆತಂಕ‌ ವ್ಯಕ್ತಪಡಿಸಿದರು.

ಜೀವನದ ಉದ್ದೇಶ ಒಳ್ಳೆಯ ಅರ್ಥಪೂರ್ಣ ಬದುಕನ್ನು ನಡೆಸುವುದಾದರೆ ಭಾವನೆಗಳು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಪ್ರೊ.ಎನ್.ಉಷಾರಾಣಿ ಅವರು, ಮನೆಯೇ ಹೆಣ್ಣುಮಕ್ಕಳ ಸಬಲೀಕರಣದ ಕೇಂದ್ರಬಿಂದು ಎಂದು ತಿಳಿಸಿದರು.

ಸಂಗೀತ ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಮತ್ತು ಅವರ ತಂಡ ಕರ್ನಾಟಕ ಶಾಸ್ತ್ರೀಯ ಸಂಗೀತದಿಂದ ಪ್ರೇಕ್ಷಕರನ್ನ ರಂಜಿಸಿದರು.

ಪ್ರೊ. ಉಷಾರಾಣಿ ಅವರ ಸಹೋದರಿ ಎನ್.ನಾಗರತ್ನ, ಹಿರಿಯ ಪತ್ರಕರ್ತರುಗಳಾದ ಈಶ್ವರ ದೈತೋಟ, ಅಂಶಿ ಪ್ರಸನ್ನಕುಮಾರ್, ಕೂಡ್ಲಿ ಗುರುರಾಜ್, ಪ್ರಾಧ್ಯಾಪಕರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.