ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ತಣಿಸಿದೆ.
ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ಕರ್ನಾಟಕದಾದ್ಯಂತ ಕ್ರಿಕೆಟ್ ಪ್ರೇಮಿಗಳು ದೇವಾಲಯಗಳಲ್ಲಿ ಹೋಮ, ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಅದರ ಫಲವೊ, ಕೋಟ್ಯಂತರ ಅಭಿಮಾನಿಗಳ ಹಾರೈಕೆಯೊ 18 ವರ್ಷಗಳ ನಂತರ ಆರ್ ಸಿ ಬಿ ಗೆದ್ದು ಬೀಗಿದೆ. ಆರ್ ಸಿ ಬಿ ಗೆದ್ದು ಐಪಿಎಲ್ ಕಪ್ ತನ್ನದಾಗಿಸಿಕೊಂಡಿದೆ.
ಆರ್ ಸಿ ಬಿ ಗೆಲುವು ಖಚಿತ ವಾಗುತ್ತಿದ್ದಂತೆ ಅಂದರೆ ಇನ್ನೂ 23 ರನ್ ಇರುವಾಗಲೇ ಮೈಸೂರು,ಬೆಂಗಳೂರು ಸೇರಿದಂತೆ ಮಹಾ ನಗರಗಳಲ್ಲಿ ಯುವಜನತೆಯ ಸಂಭ್ರಮ ಮೇರೆ ಮೀರಿತ್ತು.
ಪಂಜಾಬ್ ಕೊನೆಯ ಬಾಲ್ ಮುಗಿದ ಕೂಡಲೇ ಪಟಾಕಿಗಳ ಅಬ್ಬರ ಕಿವಿಗಡಚಿಕ್ಕುವಂತೆ ಹಚ್ವಿದ ಯುವಜನರು ಕುಣಿದು ಕುಪ್ಪಳಿಸಿ ದರು.
ಮೈಸೂರಿನಲ್ಲೂ ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮನೆ ಮಾಡಿತ್ತು.
ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಯುವಕರು,ಅಭಿಮಾನಿಗಳು,ಕ್ರಿಕೆಟ್ ಪ್ರೇಮಿಗಳು ಆರ್ ಸಿ ಬಿ ಗೆಲುವನ್ನು ಕುಣಿದು,ಶಿಳ್ಳೆ ಹೊಡೆದು ಪಟಾಕಿ ಸಿಡಿಸಿ,ಕೇಕೆ ಹಾಕುತ್ತಾ ಸ್ವಾಗತಿಸಿದ್ದು ವಿಶೇಷವಾಗಿತ್ತು.