ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದ ಇಬ್ಬರಿಗೆ ಅರಣ್ಯ ಇಲಾಖೆ 25 ಸಾವಿರ ದಂಡ ವಿಧಿಸಿದೆ.
ಕಾಡಿಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ ರಸ್ತೆ ಸಮೀಪವೇ ಫೋಟೋಶೂಟ್ ಮಾಡಿಸುತ್ತಿದ್ದ ಬೆಂಗಳೂರು ಮೂಲದ ಯುವಕ ಹಾಗೂ ಯುವತಿಗೆ ಭಾರೀ ದಂಡ ವಿಧಿಸಲಾಗಿದೆ.
ಬೆಂಗಳೂರು ಮೂಲದ ಪಲ್ಲವಿ ಮತ್ತು ಘೋಷ್ ಎಂಬುವವರು ಕಾಡಿನೊಳಗೆ ಅತಿಕ್ರಮ ಪ್ರವೇಶಿಸಿ ಫೋಟೋಶೂಟ್ ಮಾಡಿಸಿದ್ದರು.
ಇದನ್ನು ನೋಡುತ್ತಿದ್ದಂತೆ ರೊಚ್ಚಿಗೆದ್ದ ಪ್ರವಾಸಿಗರು, ಈ ವಿಡಿಯೋವನ್ನು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಅವರಿಗೆ ಕಳುಹಿಸಿ ದೂರು ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಲ್ಲವಿ ಮತ್ತು ಘೋಷ್ ಎಂಬುವವರನ್ನು ಕರೆಸಿ ಮುಚ್ಚಳಿಕೆ ಪತ್ರ ಬರೆಸಿದ್ದಲ್ಲದೇ 25 ಸಾವಿರ ದಂಡ ಪೀಕಿಸಿದ್ದಾರೆ.ಇದು ಇತರರಿಗೂ ಎಚ್ಚರಿಕೆ ಗಂಟೆಯಾಗಿದೆ.