ಮೈಸೂರು, ಜೂ.2: ನಗರದ ಎಂ.ಜಿ.ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ವಿದ್ಯಾರ್ಥಿನಿಯರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸಿ ಉತ್ತಮ ವ್ಯಾಸಂಗ ಮಾಡಲೆಂದು ಶುಭ ಹಾರೈಸಲಾಯಿತು.


ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಕೆ.ಆರ್. ಕ್ಷೇತ್ರದ ಬಿ.ಜೆ.ಪಿ.ಕಾರ್ಯದರ್ಶಿ ಬೈರತಿ ಲಿಂಗರಾಜು, ಬೋರ್ಡಿಂಗ್ ಹೋಂ ನ ಗೀತಾ, ಗಾಯಕ ಯಶವಂತ್ ಕುಮಾರ್, ಛಾಯಾ,ಹಿರಿಯ ಕ್ರೀಡಾಪಟು ಮಹದೇವ್, ಸುಬ್ರಮಣಿ, ಮಹೇಶ್, ರಾಜೇಶ್ ಕುಮಾರ್,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ದತ್ತ ಮತ್ತಿತರರು ಹಾಜರಿದ್ದರು.
