ಮೈಸೂರು: ಎಲ್ಲರೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಅದಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ,ಉತ್ತಮ ಆರೋಗ್ಯಕ್ಕೆ ಮುಂಜಾಗ್ರತೆಯೇ ಸಂಜೀವಿನಿ ಎಂದು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಹೇಳಿದರು.
ನಗರದ ಹಳೆ ಕೆಸರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಂದನಾ ಚಾರಿಟಬಲ್ ಟ್ರಸ್ಟ್, ವೀನಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಸಮೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲೆಡೆ ರಕ್ತದೊತ್ತಡ,ಮಧುಮೇಹ ಸಾಮಾನ್ಯವಾಗಿದೆ. ಇದಕ್ಕೆ ಒತ್ತಡದ ಜೀವನಶೈಲಿ ಕಾರಣ.ಆರೋಗ್ಯದ ಕುರಿತು ಯಾರೂ ನಿರ್ಲಕ್ಷ ಮಾಡಬೇಡಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಸಲಹೆ ನೀಡಿದರು.
ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ಸಂದೇಶ್ ಸ್ವಾಮಿ ಹೇಳಿದರು
ಶುದ್ಧ, ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಿದೆ,ಆರೋಗ್ಯ ಪೂರ್ಣ ಜೀವನ ಬಯಸುವವರು ಶುದ್ಧ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಉಚಿತ ಕಣ್ಣಿನ ತಪಾಸಣೆ, ಬಿಪಿ, ಮಧುಮೇಹ, ಇಸಿಜಿ ಮತ್ತು ಸ್ತ್ರೀ ಸಂಬಂಧ ಸಮಸ್ಯೆಗಳ ಸ್ತ್ರೀ ಯೋಗ ತಜ್ಞರಿಂದ ಉಚಿತ ವೈದ್ಯಕೀಯ ತಪಾಸಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಂದನಾ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷರಾದ ಗೀತಾ,
ವೀನಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ಹರಿಣಿ, ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನ, ಸಮಾಜ ಸೇವಕರಾದ ಮಾಲಿನಿ ಪಾಲಾಕ್ಷ,ಚಂದ್ರಿಕಾ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಜರಿದ್ದರು.