ಅಂಬೇಡ್ಕರ್ ಸಮುದಾಯ ಭವನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಶಂಕು ಸ್ಥಾಪನೆ

ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ 14 ಲಕ್ಷ ರೂ. ವೆಚ್ಚದ ಶೌಚಾಲಯ ನಿರ್ಮಾಣ ಕಾಮಗಾರಿಗೆ ಹನೂರು ಶಾಸಕ ಎಂ,ಆರ್, ಮಂಜುನಾಥ್ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು ಸಮುದಾಯ ಭವನ ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ ಆದರೆ ಇಲ್ಲಿಗೆ ಶೌಚಾಲಯದ ವ್ಯವಸ್ಥೆ ಇರಲಿಲ್ಲ ಅದಕ್ಕೂ ಈಗ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ಮಾಡಲು ಈ ಸಮುದಾಯ ಭವನ ಸಾಲುವುದಿಲ್ಲ ಹಾಗಾಗಿ ಮೇಲೆ ಇನ್ನೊಂದು ಅಂತಸ್ತಿಗೆ ಕೂಲಿಂಗ್ ಶೀಟ್ ಹಾಕಿ ನಿರ್ಮಾಣ ಮಾಡಿಕೊಡಲು ಅಂದಾಜು ಪಟ್ಟಿ ತಯಾರಿಸುವಂತೆ ನಿರ್ಮಿತಿ ಕೇಂದ್ರದ ಕಿರಿಯ ಅಭಿಯಂತರ ರವಿಕುಮಾರ್ ರವರಿಗೆ ಸೂಚಿಸಿದರು.

ಮೇಲೆ ಮತ್ತೊಂದು ಅಂತಸ್ತು ನಿರ್ಮಾಣವಾದರೆ ಇಲ್ಲಿನ ಬಡ ಜನರಿಗೆ ಮದುವೆ ಕಾರ್ಯಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ ಜೊತೆಗೆ ಕಲ್ಯಾಣ ಮಂಟಪಗಳಿಗೆ ಪಾವತಿಸುವ ಸಾವಿರಾರು ರೂಪಾಯಿಗಳು ಉಳಿತಾಯವಾಗಲಿದ್ದು ಇದರಿಂದ ಬಡ ಜನರಿಗೆ ಹೊರೆ ಕಡಿಮೆಯಾಗಲಿದೆ ಎಂದು ಮಂಜುನಾಥ್ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಮೂರ್ತಿ, ಸದಸ್ಯ ಜೋಗಪ್ಪ, ಸಮುದಾಯದ ಯಜಮಾನರುಗಳಾದ ಶಿವಮಲ್ಲು, ಜಡೆ ನಿಂಗಯ್ಯ, ಅವಿನಾಶ್, ಮುಖಂಡರಾದ ಮಂಜೇಶ್, ಗೋಪಾಲ್ ನಾಯ್ಕ ಮತ್ತಿತರರು ಹಾಜರಿದ್ದರು.