ಗ್ರಾಮ ಪಂಚಾಯಿತಿಗಳಿಗೆ ಸಾಮಗ್ರಿ ವಿತರಿಸಿದ ಎಂ.ಆರ್ ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

,ಕೊಳ್ಳೇಗಾಲ, ಜೂ.1: 2024 25ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಕೊಳ್ಳೇಗಾಲ ತಾಪಂ ಅನಿರ್ಬಂದಿತ ಅನುದಾನ ಕ್ರಿಯಾ ಯೋಜನೆ ಅಡಿ 30 ಲಕ್ಷ ರೂ ವೆಚ್ಚ ದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಸಾಮಗ್ರಿ ವಿತರಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ಪಾಳ್ಯ, ಮದುವನಹಳ್ಳಿ, ಸತ್ತೇಗಾಲ, ತೆಳ್ಳನೂರು, ಧನಗೆರೆ, ದೊಡ್ಡಿಂದುವಾಡಿ, ಚಿಕ್ಕಲ್ಲೂರು ಹಾಗೂ ಕೊಂಗರಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರ್, ಪ್ರಿಂಟರ್, ಕುರ್ಚಿ, ಟೇಬಲ್, ಅಲಮೇರ, ಯುಪಿಎಸ್, ಸ್ಮಾರ್ಟ್ ಕ್ಲಾಸ್, ಎಲ್.ಇ.ಡಿ ಟಿವಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ಅಗತ್ಯವಿರುವ ಇ.ಸಿ.ಜಿ ಯಂತ್ರಗಳನ್ನು ಶಾಸಕರು ವಿತರಿಸಿದರು.

ಈ ವೇಳೆ ಮಾತನಾಡಿದ ಶಾಸಕರು ತಾಲೂಕಿನ 9 ಗ್ರಾ.ಪಂ. ಗಳಿಗೆ ಮೂಲಭೂತವಾಗಿ ಅಗತ್ಯವಿರುವ ಸಾಮಗ್ರಿಗಳನ್ನು ವಿತರಿಸಲಾಗಿದೆ, ಇದರಿಂದಾಗಿ ಸಾರ್ವಜನಿಕರಿಗೆ ಹತ್ತಿರವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಆದಷ್ಟು ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗಡಿ ಭಾಗದಲ್ಲಿರುವ ನಾವು ಕೂಡ ಯಾರಿಗೂ ಏನು ಕಡಿಮೆ ಇಲ್ಲ ಎಂಬುದನ್ನು ತೋರಿಸುವ ಕೆಲಸ ಮಾಡಿದ್ದೇವೆ. ತಾ.ಪಂ ಇ.ಒ ಅವರು ಹಣ ಉಳಿಸಿ 30 ಲಕ್ಷದ ಸಲಕರಣೆಗಳನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿದ್ದಾರೆ, ಗ್ರಾ.ಪಂ ನವರು ಇದರ ಸದುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡುವಂತೆ ಸಲಹೆ ನೀಡಿದರು

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಮಂಜುಳಾ,ತಾಲೂಕು ಆರೋಗ್ಯಾಧಿಕಾರಿ ಎನ್.ಗೋಪಾಲ್, ನರೇಗಾ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜುನೈದ್ ಅಹ್ಮದ್, ಶೋಭರಾಣಿ, ಕಮಲ್ ರಾಜ್, ಮರಿಸ್ವಾಮಿ, ಶಿವಕುಮಾರ್, ಮಹೇಂದ್ರ ಮುಖಂಡರುಗಳಾದ ಮಂಜೇಶ್, ಕಣ್ಣೂರು ಮಹಾದೇವ, ಹೆಚ್ ಆರ್ ಮಹಾದೇವ, ಪಾಳ್ಯ ಗೋಪಾಲ್ ನಾಯ್ಕ ಸೇರಿದಂತೆ ಮತ್ತಿತರರು ಹಾಜರಿದ್ದರು.