ಹುಣಸೂರು: ಹುಣಸೂರು ತಾಲೂಕು ಹೊನ್ನಿಕುಪ್ಪೆ ಗ್ರಾಮದಲ್ಲಿ ಕಲ್ಲು ಪಿಟ್ ರದ್ದುಪಡಿಸಿ ಕಾಂಕ್ರೀಟ್ ಚರಂಡಿ ನಿರ್ಮಿಸಿಕೊಡಬೇಕೆಂದು ಗ್ರಾಮದವರ ಪರವಾಗಿ ಕರ್ನಾಟಕ ಪ್ರಜಾಪಾರ್ಟ(ರೈತ ಪರ್ವ) ಹುಣಸೂರು ತಾಲೂಕು ಅಧ್ಯಕ್ಷ
ಚೆಲುವರಾಜು ಒತ್ತಾಯಿಸಿದ್ದಾರೆ.

ಈ ಬಗ್ಗೆ ಅವರು ಹುಣಸೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಹುಣಸೂರು ತಾಲ್ಲೂಕು ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿ ಕಲ್ಲು ಪಿಟ್ ಮಾಡುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಚೆಲುವರಾಜು ಮನವರಿಕೆ ಮಾಡಿದ್ದಾರೆ.

ಹುಣಸೂರು ತಾಲ್ಲೂಕು ಕಸಬಾ ಹೋಬಳಿ ಹೊನ್ನಿಕುಪ್ಪೆ ಗ್ರಾಮದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಚರಂಡಿ ಕಲ್ಲು ಪಿಟ್ ನಿರ್ಮಾಣ ಮಾಡಲಾಗುತ್ತಿದೆ, ಆದರೆ ಗ್ರಾಮದಲ್ಲಿನ ವೃದ್ದರು ಓಡಾಡುವಾಗ ಮತ್ತು ಮಕ್ಕಳು ಆಟ ಆಡುವಾಗ ಬಿದ್ದರೆ ಪ್ರಾಣ ಅಪಾಯವಾಗುವ ಸಂಭವವಿದೆ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ಹೊನ್ನಿಕುಪ್ಪೆ ಗ್ರಾಮದಲ್ಲಿ ನಡೆಯುತ್ತಿರುವ ಚರಂಡಿ ಕಲ್ಲು ಪಿಟ್‌ನ್ನು ಕೂಡಲೇ ರದ್ದುಪಡಿಸಿ ಕಾಂಕ್ರೀಟ್ ಚರಂಡಿಯನ್ನು ನಿರ್ಮಾಣ ಮಾಡಿಸಿಕೊಡಬೇಕೆಂದು ಕೋರಿದ್ದಾರೆ.

ಊರ ಮಧ್ಯೆ,ಮನೆಗಳ ಮುಂದೆ ಹಾಗೂ ರಸ್ತೆಯಲ್ಲಿ ಮೂರು ಮೀಟರ್ ಗೂ ಹೆಚ್ಚು ಭೂಮಿ ಅಗೆದು ಕಲ್ಲು ಪಿಟ್ ಮಾಡಲಾಗುತ್ತಿದೆ.ಇದರಿಂದ ರಸ್ತೆ ಕಿರಿದಾಗಿ ವಾಹನ ಸವಾರರು ಬೀಳುವ ಅಪಾಯವಿದೆ.
ಅಲ್ಲದೆ ಮನೆಗಳ ಮುಂದೆಯೇ ಅವೈಜ್ಞಾನಿಕವಾಗಿ ಕಲ್ಲು ಪಿಟ್ ಮಾಡುತ್ತಿದ್ದು ಮಕ್ಕಳು ಯಾಮಾರಿ ಇದರಲ್ಲಿ ಬಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಚೆಲುವರಾಜು ಗಮನ ಸೆಳೆದಿದ್ದಾರೆ.

ಕಲ್ಲು ಪಿಟ್ ಕಾಮಗಾರಿಯನ್ನು ನಾವು ಬೇಡ ಎಂದು ಹೇಳುವುದಿಲ್ಲ,ಆದರೆ ಇದು ವೈಜ್ಞಾನಿಕ ವಾಗಿರಲಿ,ಕಾಂಕ್ರೀಟ್ ಚರಂಡಿ ಮಾಡಿಸಿದರೆ ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.
ಕಲ್ಲು ಪಿಟ್ ನಲ್ಲಿ ಸುಮ್ಮನೆ ಬಿಲ್ ಮಾಡಿ ಹಣ ಹೊಡೆಯುವ ಸಾಧ್ಯತೆಯೂ ಇದೆ ಎಂದು ಆರೋಪಿಸಿದ್ದಾರೆ.

ಅಪಾಯದಲ್ಲಿರುವ ಕಲ್ಲು ಪಿಟ್ ಕಾಮಗಾರಿಯನ್ನು ನಿಲ್ಲಿಸಿ ಕಾಂಕ್ರೀಟ್ ಚರಂಡಿಯನ್ನು ನಿರ್ಮಿಸಿಕೊಡಬೇಕೆಂದೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಈ ಕುರಿತು ಮನ ಹರಿಸಬೇಕೆಂದು
ಚೆಲುವರಾಜು ಒತ್ತಾಯಿಸಿದ್ದಾರೆ.