ಮೈಸೂರು: ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಮಾರ್ಟಿನ್ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು ಗುರುವಾರ ಧ್ರುವ ಮೈಸೂರಿಗೆ ಆಗಮಿಸಿ ಅವಧೂತರ ಆಶೀರ್ವಾದ ಪಡೆದಿದ್ದಾರೆ.
ಈಗಾಗಲೇ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿದ್ದು, ಒಟ್ಟು 13 ಭಾಷೆಗಳಲ್ಲಿ ಚಿತ್ರ ತಯಾರಾಗಿದೆ,ಈ ಮೂಲಕ ಗ್ಲೋಬಲ್ ಬಿಡುಗಡೆಗೆ ಮಾರ್ಟಿನ್ ಸಜ್ಜಾಗಿದೆ.
ಮಾರ್ಟಿನ್ ಚಿತ್ರ ಯಶಸ್ವಿಯಾಗುವಂತೆ ಪ್ರಾರ್ಥಿಸಲು ಅರ್ಜುನ್ ಅವಧೂತ ರ ಆಶೀರ್ವಾದ ಪಡೆದರು ಅಕ್ಷನ್ ಪ್ರಿನ್ಸ್.
ಮೈಸೂರಿನ ಸೋನಾರ್ ಬೀದಿಯಲ್ಲಿರುವ ಅರ್ಜುನ್ ಅವಧೂತರ ನಿವಾಸಕ್ಕೆ ಬೇಟಿ ಧ್ರುವ ಅಶಿರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅರ್ಜುನ್ ಅವಧೂತರು ಧ್ರುವ ಸರ್ಜಾಗೆ ಶಾಲು ಹೊದಿಸಿ ಹಾರ ಹಾಕಿ ಆಶೀರ್ವದಿಸಿ ಶುಭ ಕೋರಿದರು.
ಈ ವೇಳೆ ಧ್ರುವ ಸರ್ಜಾ ಅವರ ಸಹೋದ್ಯೋಗಿಗಳು ಕೂಡ ಆಶಿರ್ವಾದ ಪಡೆದರು.