ಅಕ್ರಮ ಮುಚ್ಚಿಹಾಕಲು ಮುಡಾಗೆ ರಕ್ಷಿತ್ ನೇಮಕ-ಸ್ನೇಹಮಯಿ ಕೃಷ್ಣ

ಮೈಸೂರು: ಅಕ್ರಮಗಳನ್ನು ಮುಚ್ಚಿಹಾಕಲು ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ರಕ್ಷಿತ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ದೇವನೂರು ಭಾಗದಲ್ಲಿ ಮಹೇಂದ್ರ ಮನೆ ಎಂಬವರಿಗೆ ಕೃಷಿ ಭೂಮಿ ಅಂತ ಹೇಳಿ ಅಕ್ರಮವಾಗಿ ದಾಖಲೆ ನೀಡಿದ್ದು ಇದೇ ರಕ್ಷಿತ್. ಅಂದು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಇದೀಗ ಅವರನ್ನೇ ಎಂ.ಡಿ.ಎ ಆಯುಕ್ತರನ್ನಾಗಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಲೋಕಾಯುಕ್ತಕ್ಕೆ ಕೊಟ್ಟಿರುವ ದೂರಿನಲ್ಲಿ ಇವರ ಹೆಸರು ಕೂಡಾ ಇದೆ. ಇವರು ಮಾಡಿರುವ ಅಕ್ರಮಗಳನ್ನೂ ತಿಳಿಸಿ ದ್ದೇನೆ, ಹೀಗಿರುವಾಗ ಇವರನ್ನೇ ಎಂಡಿಎ ಆಯುಕ್ತರನ್ನಾಗಿ ಸರ್ಕಾರ ಮಾಡಿದೆ,
ಅಕ್ರಮಗಳನ್ನು ಮುಚ್ಚಲು ರಕ್ಷಿತ್ ಅವರನ್ನು ಅಧಿಕಾರಕ್ಕೆ ತಂದು ಕೂರಿಸಿದ್ದಾರೆ, ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.