ವೃದ್ಧಾಶ್ರಮದ ಹಿರಿಯರಿಗೆ ಹಣ್ಣು ವಿತರಿಸಿವಿಕ್ರಂ ಅಯ್ಯಂಗಾರ್ ಹುಟ್ಟುಹಬ್ಬ ಆಚರಣೆ

ಮೈಸೂರು: ವೃದ್ಧಾಶ್ರಮದ ಹಿರಿಯರಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ,
ವಿಕ್ರಂ ಅಯ್ಯಂಗಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ನಗರದ ಸರಸ್ವತಿಪುರಂ ಪಂಪಾಪತಿ ರಸ್ತೆಯಲ್ಲಿರುವ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿಯೂ ಆದ ವಿಕ್ರಂ ಅಯ್ಯಂಗಾರ್ ಆಚರಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ಮತ್ತು ಸ್ನೇಹಿತರು ವಿಕ್ರಮ್ ಅಯ್ಯಂಗಾರ್ ಅವರಿಗೆ ಜನ್ಮದಿನದ ಶುಭ ಕೋರಿದರು.

ಈ ವೇಳೆ ಕೆಪಿಸಿಸಿ ಸದಸ್ಯ ನಜರ್ಬಾದ ನಟರಾಜ್,ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷೆ ನಾಗಶ್ರೀ ಸುಚಿಂದ್ರ, ಸಮಾಜ ಸೇವಕಿ ವಿದ್ಯಾ, ಹಾಲನಹಳ್ಳಿ ಪುಟ್ಟಸ್ವಾಮಿ,
ರಾಘವೇಂದ್ರ,ಮಹಾನ್ ಶ್ರೇಯಸ್,
ಸುಚೇಂದ್ರ,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್ ಮತ್ತಿತರರು ಶುಭ ಹಾರೈಸಿದರು.