ಮೈಸೂರು: ಅರಿವು ಸಂಸ್ಥೆ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಭಕ್ತವೃಂದದ ವತಿಯಿಂದ ಸ್ವಾಮಿಗಳ 83ನೇ ಹುಟ್ಟು ಹಬ್ಬದ ಅಂಗವಾಗಿ ಗೋಪೂಜೆ ನೆರವೇರಿಸಲಾಯಿತು.
ಮೈಸೂರಿನ ನಂಜುಮಳಿಗೆ ಯಲ್ಲಿ ಗೋಪೂಜೆ ಸಲ್ಲಿಸಿ ನಂತರ ಗೋವುಗಳಿಗೆ ಮೇವು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ನಮ್ಮ ಮೈಸೂರಿನ ಹೆಮ್ಮೆಯ ಧಾರ್ಮಿಕ ಆಸ್ತಿ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳರವರು ಎಂದು ಬಣ್ಣಿಸಿದರು.
ಇಂದು ಅವರ 83 ನೇ ಜನ್ಮದಿನವನ್ನು ಅವರ ಭಕ್ತರಾದ ನಾವುಗಳು ಗೋ ಸೇವೆ ಮೂಲಕ ಆಚರಿಸುತ್ತಿದ್ದೇವೆ,ಈ ಹಿಂದೆ ರಾಜ ಮಹಾರಾಜರುಗಳು ಚಾಮುಂಡಿ ಬೆಟ್ಟ, ಮೈಸೂರು ಸಂಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಶ್ರದ್ಧ ಕೇಂದ್ರಗಳನ್ನು ತೆರೆದಿದ್ದರು, ಸ್ವಾತಂತ್ರ್ಯ ನಂತರ ಆಸ್ಥಾನವನ್ನು ತುಂಬಿದವರು ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳು ರವರು ಎಂದು ಹೇಳಿದರು.
ನಾಡಿನ ಜನತೆಗೆ ಧಾರ್ಮಿಕ ಹಾಗೂ ಧರ್ಮ ಜಾಗೃತಿ ಉಂಟು ಮಾಡುತ್ತಿರುವ ಪೂಜ್ಯರು ನೂರು ಕಾಲ ಹೀಗೆ ಮಾರ್ಗದರ್ಶನ ನೀಡುತ್ತಿರಲಿ ಎಂದು ಆಶಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್,ನಮ್ಮ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕೊಂಡಾಡಿದರು.
ಗಣಪತಿ ಶ್ರೀಗಳು ಸಂಗೀತದ ಮೂಲಕ ಜನರ ಮನಃಕ್ಲೇಶ ಹಾಗೂ ಅನಾರೋಗ್ಯ ಗುಣಪಡಿಸುವ ವಿಶೇಷತೆಯನ್ನು ಅಳವಡಿಸಿ ಕೊಂಡಿದ್ದಾರೆ ಎಂದು ಬಣ್ಣಿಸಿದರು.
ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್, ಗೌರಿಶಂಕರ ನಗರ ಶಿವು,
ಮಲ್ಲೇಶ್, ಚಕ್ರಪಾಣಿ,ಜತ್ತಿಪ್ರಸಾದ್, ಚಂದ್ರು, ಮಹದೇವಸ್ವಾಮಿ ಮತ್ತಿತರರು ಭಾಗವಹಿಸಿದ್ದರು.