ಮರಿಯೊಂದಿಗೆ ಮನೆಯ ಮುಂದೆ ನಿಂತು ಆತಂಕ ಸೃಷ್ಟಿಸಿದ ಭೀಮ

(ವರದಿ:ಸಿಬಿಎಸ್)

ಹಾಸನ : ಬಿರುಗಾಳಿ ಸಹಿತ ಮಳೆಯ ಸುರಿಯುತ್ತಿದ್ದರೂ ಮನೆಯ ಮುಂದೆಯೇ ಆನೆ ಭೀಮ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ.

ಆಹಾರ ಅರಸಿ ಮರಿಯೊಂದಿಗೆ ಮನೆಯ ಬಾಗಿಲಿಗೆ ಬಂದ ದೈತ್ಯಾಕಾರದ ಕಾಡಾನೆ ಭೀಮನನ್ನು ಕಂಡು ಮನೆಯವರು ಹೌಹಾರಿದರು.

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಉದೇವಾರ ಗ್ರಾಮದಲ್ಲಿ ಆನೆ ಭೀಮ
ಬೆಳ್ಳಂಬೆಳಿಗ್ಗೆ ಕೆ.ಎಚ್.ಬಸವರಾಜು ಎಂಬುವವರ ಮನೆಯ ಬಳಿ ಬಂದು ನಿಂತು ಶಾಕ್ ಕೊಟ್ಟಿದ್ದಾನೆ.

ಭೀಮನೊಂದಿಗೆ‌ ಬೇರೆ ಕಾಡಾನೆಗಳು ಇದ್ದು,
ಕಾಡಾನೆಗಳನ್ನು ಕಂಡು ಬಸವರಾಜು ಕುಟುಂಬಸ್ಥರು ಆತಂಕಗೊಂಡರು.

ಕಾಡಾನೆಗಳು ಮನೆಯ ಬಳಿ ಬಂದು ನಿಲ್ಲುತ್ತಿದ್ದಂತೆ ಕಿಟಕಿಯಿಂದ ಅಕ್ಕಪಕ್ಕದವರನ್ನು ಕೂಗಿದ್ದಾರೆ.

ಮನೆಯವರ ಅದೃಷ್ಟವೇ ಇರಬೇಕು,ಸ್ವಲ್ಪ ಹೊತ್ತು ಮನೆಯ ಮುಂದೆ ನಿಂತಿದ್ದ ಭೀಮ ತನ್ನ ಮರಿ ಹಾಗೂ ಇತರೆ ಆನೆಗಳೊಂದಿಗೆ
ನಿಧಾನವಾಗಿ ವಾಪಾಸ್ ಹೋಗಿದ್ದಾನೆ.