ಬಯಲಾಟ ಕಲೆಗಳ ಬಗ್ಗೆ ಹೆಚ್ಚು ಪ್ರಚಾರ‌, ಜಾಗೃತಿ ಅಗತ್ಯ-ಡಾ ಕೆ ಆರ್ ದುರ್ಗಾದಾಸ್

ಧಾರವಾಡ: ಬಯಲಾಟ ಕಲೆಗಳ ಬಗ್ಗೆ ಹೆಚ್ಚು ಪ್ರಚಾರ‌ ಮತ್ತು ಜಾಗೃತಿಯ ಅಗತ್ಯವಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಡಾ ಕೆ ಆರ್ ದುರ್ಗಾದಾಸ್ ತಿಳಿಸಿದರು.

ಧಾರವಾಡ ನಗರದ ಅವರ ನಿವಾಸಕ್ಕೆ ಬುಧವಾರ ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭೇಟಿ ನೀಡಿ ಅಭಿನಂದಿಸಿದ ವೇಳೆ ಅವರು ಮಾತನಾಡಿದರು.

ಕರಾವಳಿ ಯಕ್ಷಗಾನ ವಿಶ್ವ ವಿಖ್ಯಾತವಾಗಿದೆ, ಅದೇ ರೀತಿ ನಮ್ಮ ಮೂಡಲಪಾಯ ಯಕ್ಷಗಾನಕ್ಕೂ ಸ್ಥಾನ ಮಾನ ಸಿಗಬೇಕಿದೆ, ಕರ್ನಾಟಕದ 22 ಜಿಲ್ಲೆಗಳಲ್ಲಿ ಕಲಾವಿದರು ಮತ್ತು ಕಲೆಯನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಸಂಘ ಸಂಸ್ಥೆಗಳ ಸಂಯೋಗದೊಂದಿಗೆ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಡಾ ಕೆ ಆರ್ ದುರ್ಗಾದಾಸ್
ತಿಳಿಸಿದರು.

ಇದೇ ಸಂದರ್ಭದಲ್ಲಿ ಜೂನ್ 25 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಘಟಕ ವತಿಯಿಂದ ನಡೆಯುವ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಸಮ್ಮೇಳನಕ್ಕೆ ಡಾ ಕೆ ಆರ್ ದುರ್ಗಾ ದಾಸ್ ಅವರನ್ನು ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಆಹ್ವಾನ ನೀಡಿದರು.

ಇನ್ನು ಮುಂದೆ ಕನ್ನಡ ಜಾನಪದ ಪರಿಷತ್ ಬಯಲಾಟ ಕಲಾಪ್ರಕಾರಗಳ
ತರಬೇತಿ ಕಾರ್ಯಗಾರ ನಡೆಸುವ ಮೂಲಕ ದಶಮಾನೋತ್ಸವ ಸಂದರ್ಭದಲ್ಲಿ ಬಯಲಾಟ ಕಲೆಗೂ ಹೆಚ್ಚಿನ ಒತ್ತು ನೀಡುವುದಾಗಿ ಡಾ ಜಾನಪದ ಎಸ್ ಬಾಲಾಜಿ ಈ ವೇಳೆ ತಿಳಿಸಿದರು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ, ರಾಜ್ಯ ಕಾರ್ಯದರ್ಶಿ ಪ್ರೊ. ಕೆ ಎಸ್ ಕೌಜಲಗಿ, ಧಾರವಾಡ ಜಿಲ್ಲಾ ಕಾರ್ಯದರ್ಶಿ ಸದಾನಂದ ಮತ್ತಿತರರು ಡಾ ಕೆ ಆರ್ ದುರ್ಗಾದಾಸ್ ಅವರನ್ನು ಅಭಿನಂದಿಸಿದರು.