ಲರ್ನರ್ನ್ ನೀಟ್ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ನೀಟ್ ಕೋಚಿಂಗ್

ಮೈಸೂರು: ಲರ್ನರ್ನ್ ನೀಟ್ ಅಕಾಡೆಮಿ ಮತ್ತು ಕಾರ್ಪೊರೇಟ್ ಆಸ್ಪತ್ರೆಯ ಸಹಯೋಗದಲ್ಲಿ ಲಾಂಗ್ ಟರ್ಮ್ ನೀಟ್ (NEET) ಕೋಚಿಂಗ್ ಹಮ್ಮಿಕೊಳ್ಳಲಾಗಿದೆ.

ಇದು ನಿಜಕ್ಕೂ ಅತ್ಯುತ್ತಮ‌ ಕಾರ್ಯವಾಗಿದೆ,ಬಹಳಷ್ಟು ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಕೂಡಾ ಆಗಲಿದೆ.

ಕಾರಣಾಂತರಗಳಿಂದ ಎಷ್ಟೋ ವಿದ್ಯಾರ್ಥಿ ಗಳು ನೀಟ್ ಪರೀಕ್ಷೆಯನ್ನು ಎದುರಿಸಲಾಗದೆ ಪರಿತಪಿಸುತ್ತಾರೆ.ಅಂತವರಿಗೆ ಈ ಕೋಚಿಂಗ್ ಒಳಿತಾಗಲಿದೆ.

ನೀಟ್ ಪರೀಕ್ಷೆಯಲ್ಲಿ ಹೀಗೆ ಪುನಃ ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಪರಿಣಿತ ಮಾರ್ಗದರ್ಶನ ಮತ್ತು ಪರಿವರ್ತನಾತ್ಮಕ ಅಧ್ಯಯನದ ಅನುಭವವನ್ನು ನೀಡುವ ಸಲುವಾಗಿಯೇ ನೀಟ್ ಕೋಚಿಂಗ್ ಪ್ರಾರಂಭಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ಈ ವಿಶೇಷ ವಸತಿ ಕಾರ್ಯಕ್ರಮವನ್ನು ಭವಿಷ್ಯದ ವೈದ್ಯಕೀಯ ವೃತ್ತಿಪರರನ್ನು ರೂಪಿಸುವ ಉದ್ದೇಶದಿಂದ ಪರಿಚಯಿಸಲಾಗುತ್ತಿದೆ ಎಂದು ಹೇಳಿದೆ.

ಈ ಕಾರ್ಯಕ್ರಮವನ್ನು ಮುರಳಿ ಕೊನಾರೆಡ್ಡಿ (ಐಐಟಿ ಪದವಿ) ಮತ್ತು ಡಾ. ನೇಮಿ ಚಂದ್ರ (ಎಂಎಸ್, NEET ಟಾಪರ್ ಮತ್ತು ಗೋಲ್ಡ್ ಮೆಡಲಿಸ್ಟ್, ಮೈಸೂರು ಮೆಡಿಕಲ್ ಕಾಲೇಜು) ಅವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತದೆ.

ವಿಷಯ ಪರಿಣಿತರು ತರಗತಿಗಳನ್ನು ನಡೆಸಲಿದ್ದು, ಉತ್ಸಾಹಭರಿತ ವೈದ್ಯಕೀಯ ವಿದ್ಯಾರ್ಥಿಗಳಿಂದ ವೈಯಕ್ತಿಕ ಮಾರ್ಗದರ್ಶನ ಕೂಡಾ ಲಭ್ಯವಿರುತ್ತದೆ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಮತ್ತು ಸಮಗ್ರ NEET ತಯಾರಿ ಅನುಭವವನ್ನು ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಲರ್ನರ್ಸ್ NEET ಅಕಾಡೆಮಿ ಮತ್ತು ಕಾರ್ಪೊರೇಟ್ ಆಸ್ಪತ್ರೆಯ ಸಹಯೋಗದಲ್ಲಿ, ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳ ದೀರ್ಘಕಾಲೀನ ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಒತ್ತು ನೀಡುವುದು.

ಕೇವಲ 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಿದ್ದು,ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ,ವಿದ್ಯಾರ್ಥಿಗಳ ವೈಯಕ್ತಿಕ ಗಮನ ಮತ್ತು ಮಾರ್ಗದರ್ಶನ ನೀಡಲಾಗುವುದು.

ಪ್ರತಿಭೆಯನ್ನು ಉತ್ತೇಜಿಸುವ ಸಮಗ್ರ ವಿದ್ಯಾರ್ಥಿವೇತನ ಯೋಜನೆಗಳನ್ನು ಕಾಡಾ ಹೊಂದಿದೆ.

ನಿರೀಕ್ಷಿತ NEET ಅಂಕಗಳು: 200 ರಿಂದ 300+,2ನೇ ಪಿಯುಸಿ/ಸಿಬಿಎಸ್‌ಇ ಅಂಕಗಳು: ಕನಿಷ್ಠ 65%+

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಹಿನ್ನಲೆಯಲ್ಲಿ ಯಾವುದೇ ಭೇದವಿಲ್ಲದೆ, ಪರಿಣಿತ ತರಬೇತಿ ಮತ್ತು ಬೆಂಬಲಾತ್ಮಕ ಅಧ್ಯಯನದ ವಾತಾವರಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಸೀಮಿತ ಪ್ರವೇಶದಿಂದ ಪ್ರತಿಯೊಬ್ಬ ವಿದ್ಯಾರ್ಥಿಗೆ ವೈಯಕ್ತಿಕ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಲಹೆ ದೊರೆಯುತ್ತದೆ.

ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ. ಆಸಕ್ತ NEET ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಲರ್ನರ್ಸ್ NEET ಅಕಾಡೆಮಿಯನ್ನುಸಂಪರ್ಕಿಸಬಹುದು.
ಅರ್ಜಿ‌ ಸಲ್ಲಿಕೆಗೆ ಜೂನ್ ಎರಡನೆ ವಾರದತನಕ ಅವಕಾಶವಿದ್ದರೂ ಅತ್ಯಂತ ಕಡಿಮೆ ಅವಕಾಶ ಇರುವುದರಿಂದ ಈಗಲೇ ಅರ್ಜಿ ಸಲ್ಲಿಸುವುದು ಒಳಿತು.

ಅಭ್ಯರ್ಥಿಗಳು ಗೂಗಲ್ ಫಾರ್ಮ್ ಭರ್ತಿ ಮಾಡಬಹುದು.
https://forms.qle/fbtwDXpY8Rx8P8Ev9

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ನಂಬರುಗಳನ್ನು
8078115720, 9916933202
ಸಂಪರ್ಕಿಸಬಹುದಾಗಿದೆ.