ಕಾಂಗ್ರೆಸ್ ಸರ್ಕಾರದಿಂದ ಜನಪರ ಆಡಳಿತ-ನಜರ್ಬಾದ್ ನಟರಾಜ್

Spread the love

ಮೈಸೂರು: ರಾಜ್ಯ‌ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಕೆಪಿಸಿಸಿ
ಸದಸ್ಯ ನಜರ್ಬಾದ್ ನಟರಾಜ್ ತಿಳಿಸಿದರು.

ಕಾಂಗ್ರೆಸ್ ಆಡಳಿತಕ್ಕೆ ಇದೀಗ ಎರಡು ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ‌
ನಗರದ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು‌
ವಿಶೇಷ ಪೂಜೆ ಸಲ್ಲಿಸಿದ ವೇಳೆ ನಜರ್ಬಾದ್ ನಟರಾಜ್ ಮಾತನಾಡಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಸಾಮಾನ್ಯ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬಿಜೆಪಿ ಮುಖಂಡರು ಬೊಬ್ಬೆ ಹೊಡೆದಿದ್ದರು ಅವರ ಆರೋಪಗಳಿಗೆ ನಮ್ಮ ಸರ್ಕಾರ ಕೆಲಸಗಳ ಮೂಲಕ ತಕ್ಕ ಉತ್ತರ ನೀಡಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಐದು ವರ್ಷ ಯಶಸ್ವಿಯಾಗಿ ಸರ್ಕಾರ ಆಡಳಿತ ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ,
ಸಿಹಿ ವಿತರಿಸಿ ರಾಜ್ಯ ಸರ್ಕಾರಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾಧ್ಯಕ್ಷ ಜಿ ರಾಘವೇಂದ್ರ, ರಾಜೇಶ್, ಪಳನಿ, ಎಸ್ ಎನ್ ರಾಜೇಶ್, ರವಿಚಂದ್ರ,ಲೋಕೇಶ್, ಕೃಷ್ಣಪ್ಪ(ಗಂಡಯ್ಯ), ಮೋಹನ್ ಕುಮಾರ್,ಪಾಂಡ,ಫ್ರಾನ್ಸಿಸ್, ನಿತಿನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.