ಮೈಸೂರು: ಡೇರಿಂಗ್ ಸ್ಟಾರ್ ಎಸ್ ಜಯ ಪ್ರಕಾಶ್ ಅಭಿನಯಿಸಿರುವ ಭಗೀರಥ ಚಲನಚಿತ್ರ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ
ನಗರದಲ್ಲಿ ಶನಿವಾರ ಸ್ಟಾರ್ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಡಾ. ರಾಜಕುಮಾರ್ ಸಂಘ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಸ್ಟಾರ್ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಮೂಲಕ ಭಗೀರಥ ಚಲನಚಿತ್ರ ತಂಡಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಅಭಿನಂದನೆಯನ್ನು ಸಲ್ಲಿಸಲು ಪ್ರಭಾ ಚಿತ್ರ ಮಂದಿರಕ್ಕೆ ನೂರಾರು ಜನರೊಂದಿಗೆ ತೆರಳಿ ತಮಟೆ ಹಾಗೂ ಪಟಾಕಿಗಳನ್ನು ಸಿಡಿಸಿ, ನಾಯಕನಟರಾದ ಎಸ್ ಜಯಪ್ರಕಾಶ್ ರವರನ್ನು ಬರಮಾಡಿಕೊಳ್ಳಲಾಯಿತು.

ಅಪಾರ ಅಭಿಮಾನಿಗಳು ಎಸ್ ಜಯಪ್ರಕಾಶ್ ಅವರಿಗೆ ಹಾರ ತುರಾಯಿಗಳನ್ನು ಹಾಕಿ ಸಂಭ್ರಮಿಸಿದರು. ಭರ್ತಿಯಾದ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಕುಳಿತು ಅವರು ಸಿನಿಮಾ ವೀಕ್ಷಿಸಿದರು.
ಬೆಳಿಗ್ಗೆಯಿಂದ ಸಂಜೆವರೆಗೆ ಅಪಾರ ಅಭಿಮಾನಿಗಳು ಪ್ರಭಾ ಟಾಕೀಸ್ ಮುಂದೆ ತಮಟೆ ಮತ್ತು ಡೋಲು ಬಾರಿಸುತ್ತಾ ಪಟಾಕಿಗಳನ್ನು ಸಿಡಿಸುತ್ತಾ ನೃತ್ಯ ಮಾಡುವುದರ ಮೂಲಕ ಭಗೀರಥ
ಚಲನಚಿತ್ರ ಶತದಿನೋತ್ಸವವನ್ನು
ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಭಗೀರಥ ಚಲನಚಿತ್ರದ ನಿರ್ಮಾಪಕರಾದ ರಮೇಶ್, ಭೈರಪ್ಪ, ಡಾ . ರಾಜ್ ಅವರ ಕುಟುಂಬದ ಎಸ್ ಎ ಶ್ರೀನಿವಾಸ್, ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ರಾಜ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ, ಭಾಗ್ಯಮ್ಮ, ಪ್ರಭುಶಂಕರ, ಮಧುವನ ಚಂದ್ರು, ಕುಮಾರ್, ರಘು ಅರಸ್, ಬಸವರಾಜು , ಪ್ರದೀಪ್, ಅಭಿ, ಹನುಮಂತೆಗೌಡ, ರಘು ಆಚಾರ್, ಕೃಷ್ಣಪ್ಪ , ಸುಬ್ಬೇಗೌಡ, ಮಹೇಶ್ ಕುಮಾರ್, ಶಿವರಾಂ,ರವೀಶ್ ಮತ್ತಿತರರು ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ ಅವರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದರು.