ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ ಬಗ್ಗೆ ಜಾಗೃತಿ ಅಗತ್ಯ: ಸಂದೀಪ್

Spread the love

ಮೈಸೂರು: ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಚಾಮುಂಡಿಪುರಂ, ಮೈಸೂರು ಹಾಗೂ ನಗರ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ದಿನ‌ ಆಚರಿಸಲಾಯಿತು.

ಮೈಸೂರಿನ ವಾರ್ಡ್ ನಂಬರ್ 55ರ ಹೊಸ ಬಂಡಿಕೇರಿ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಸೊಳ್ಳೆಯಿಂದ ಹರಡುವ ಮಲೇರಿಯಾ, ಪೈಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ ಬಗ್ಗೆ ಅರಿವು ಮೂಡಿಸಲಾಯಿತು.

ಈ ವೇಳೆ ನಗರ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿ ಅಧ್ಯಕ್ಷ ಸಂದೀಪ್ ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಳೆ ಜಾಸ್ತಿ ಆಗುತ್ತಿದ್ದು, ನಿಂತ ನೀರಿನಿಂದ ಸೊಳ್ಳೆಗಳು ಹೆಚ್ಚಾಗುತ್ತದೆ, ಸೊಳ್ಳೆ ಕಡಿತದಿಂದ ಮಲೇರಿಯಾ, ಪೈಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ ಹರಡುತ್ತದೆ ಎಂದು ಹೇಳಿದರು.

ಸೊಳ್ಳೆ ಕಚ್ಚಿದ ಮೂರರಿಂದ ಏಳು ದಿನಗಳಲ್ಲಿ ಹೆಚ್ಚಿನ ಜನರು ಜ್ವರ, ತಲೆನೋವು, ಕಣ್ಣುಗಳು ಕೆಂಪಾಗುವಿಕೆ ಮತ್ತು ಕೀಲು ನೋವಿನಂತಹ ರೋಗಲಕ್ಷಣಗಳು ಕಂಡುಬಂದರೆ ಸೂಕ್ತ ಚಿಕಿತ್ಸೆಯ ಮೂಲಕ ರೋಗಲಕ್ಷಣಗಳನ್ನು ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನೆಯ ಸುತ್ತಮುತ್ತಲಿನ ತ್ಯಾಜ್ಯ ವಸ್ತುಗಳಾದ ಟೈಯರ್, ಎಳನೀರು ಚಿಪ್ಪು, ಹೂವಿನ ಕುಂಡಗಳು, ಒಡೆದ ಬಾಟಲ್, ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ಸೊಳ್ಳೆಗಳನ್ನು ತಡೆಗಟ್ಟಬಹುದು.

ಸೊಳ್ಳೆ ಉತ್ಪತಿ ತಾಣಗಳಾದ ಡ್ರಮ್, ಬ್ಯಾರೆಲ್, ಏರ್ ಕೂಲರ್, ತೊಟ್ಟಿ ಇತ್ಯಾದಿಗಳನ್ನು ವಾರಕ್ಕೊಮ್ಮೆ ಶುಚಿಪಡಿಸಿ ಇಟ್ಟುಕೊಂಡರೆ ಸೊಳ್ಳೆಗಳು ಕಂಡು ಬರುವುದಿಲ್ಲ ಎಂದು ತಿಳಿಸಿದರು

ರೋಗ ಲಕ್ಷಣ ಕಂಡು ಬಂದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಚಾಮುಂಡಿಪುರಂ, ನಗರ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿ ಅಧ್ಯಕ್ಷ ಸಂದೀಪ್ ಚಂದ್ರಶೇಖರ್,

ಪಿ ಹೆಚ್ ಸಿ ಒ ಚಲುವಮ್ಮ, ಮಮತಾ, ಹೆಚ್ ಐ ಒ ವಿಜಯ್ ಕುಮಾರ್, ಮಾನಸ, ಯಶವಂತ್ ಕುಮಾರ್, ಕೆ‌ ಹೆಚ್ ಪಿ ಟಿ ಯ ಅನಿತಾ, ಆಶಾ ಕಾರ್ಯಕರ್ತೆ ಗೌರಮ್ಮಣ್ಣಿ, ಸಮಿತಿಯ ಭಾಸ್ಕರ್, ಧರ್ಮೇಂದ್ರ ಎನ್, ಧನುಷ್, ಮೀನಾ , ಜಯಂತಿ, ಗೀತ, ಅಂಬಳೆ ಶಿವಣ್ಣ, ಬಸವರಾಜು ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.