(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಹನೂರು ತಾಲ್ಲೋಕಿನ ಸುಪ್ರಸಿದ್ಧ ಧಾರ್ಮಿಕ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಕೇವಲ 29 ದಿನಗಳಲ್ಲಿ 2.54 ಕೋಟಿ ರೂ. ನಗದು 69 ಗ್ರಾಂ, ಚಿನ್ನ ಹಾಗೂ 2.ಕೆ.ಜಿ 770 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಗುರುವಾರ ಬೆಳಿಗ್ಗೆ ಗಂಟೆಯಿಂದ ಸಂಜೆ 7ರ ವರೆಗೆ ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿ ಇರುವ ವಾಣಿಜ್ಯ ಸಂಕೀರ್ಣ ದಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಹುಂಡಿಯಲ್ಲಿ 2,54 27,263 ರೂ. ನಗದು 69 ಗ್ರಾಂ, ಚಿನ್ನ ಹಾಗೂ 2.ಕೆ.ಜಿ 770 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ವಿಶೇಷ ದಿನಗಳು ಸ್ತ್ರೀಶಕ್ತಿ ಯೋಜನೆ ಹಾಗೂ ಮಕ್ಕಳಿಗೆ ಶಾಲಾ ರಜಾ ದಿನಗಳು ಸೇರಿದಂತೆ ಇನ್ನಿತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರಿಂದ ಹಾಗೂ ಸಚಿವ ಸಂಪುಟ ಸಭೆ ನಡೆದಿದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಮಂದಿ ಆಗಮಿಸಿದ್ದುದರಿಂದ ಹೆಚ್ಚು ಹಣ ಸಂಗ್ರಹವಾಗಿದೆ.

ಸಿ.ಸಿ ಕ್ಯಾಮರಗಳ ಕಣ್ಗಾವಲಿನಲ್ಲಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಬ್ಯಾಂಕ್ ಆಫ್ ಬರೋಡದ ಸ್ಥಳಿಯ ಶಾಖೆ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯ ನಡೆಸಿದರು.

ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಉಪ ಕಾರ್ಯದಶಿ ಚಂದ್ರಶೇಖರ್, ನಾಮ ನಿರ್ದೇಶಕ ಸದಸ್ಯರು, ದೇವಾಸ್ಥಾನದ ಅಧೀಕ್ಷಕ ಗುರುಮಲ್ಲಯ್ಯ, ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿ, ಮಲೆ ಮಹದೇಶ್ವರ ಬೆಟ್ಟ ಠಾಣೆಯ ಸಿಪಿಐ ಹಾಗೂ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು.