ವೃದ್ಧಾಶ್ರಮದ ತಾಯಂದಿರಿಗೆ ಉಪಹಾರನೀಡಿ ಜನುಮದಿನ ಆಚರಣೆ

ಮೈಸೂರು: ಕಾಂಗ್ರೆಸ್ ಮುಖಂಡ ಹಾಪಾನ್ ಅವರ ಹುಟ್ಟುಹಬ್ಬವನ್ನು ವಿಮಲಾ ಟರ್ಮಿನಲ್ ಆಶ್ರಮದಲ್ಲಿ ಬೆಳಗಿನ ಉಪಹಾರ ಕಲ್ಪಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಪ್ರತಿ ವರ್ಷ ಬರುವ ಹುಟ್ಟುಹಬ್ಬವನ್ನು ಕೇಕು ಹಾರ ತುರಾಯಿ ತಂದು ಆಚರಿಸಿಕೊಳ್ಳುವವ ಸಂಖ್ಯೆಯೇ ಹೆಚ್ಚು, ಆದರೆ ಇದೆಲ್ಲವನ್ನು ತ್ಯಜಿಸಿ ಬಡವರು, ಅನಾಥಾಶ್ರಮಗಳು, ವೃದ್ಧಾಶ್ರಮಗಳು ಒಂದು ದಿನದ ಅಥವಾ ಒಂದು ಹೊತ್ತಿನ ಊಟ, ಹಣ್ಣು ಹಂಪಲು ವಿತರಿಸುವ ಮೂಲಕ ಅವರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಯುವ ಪೀಳಿಗೆಯ ಇಂತಹ ದಾನ ಧರ್ಮದ ಗುಣ ಬೆಳೆಸಿಕೊಂಡರೆ ಉತ್ತಮ ಎಂದು ಹೇಳಿದರು.

ಈ ವೇಳೆ ಅಯಾನ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಆರಿಫ್ ಪಾಷಾ, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಹಿನಕಲ್ ಉದಯ್, ಗಂಧನಹಳ್ಳಿ ವೆಂಕಟೇಶ್, ಚಂದ್ರು, ರವಿ, ವಾರದರಾಜು ಉಪಸ್ಥಿತರಿದ್ದರು.