ಮೈಸೂರು: ನಗರ ಭೂ ಮಾಪನ ಶಾಖೆ ಅಧಿಕಾರಿಗಳ ಯಡವಟ್ಟಿನಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಕಪನಿಗೌಡ ಅವರು ಏಕಾಂಗಿ ಪ್ರತಿಭಟನೆ ನಡೆಸಿದರು.
ಭೂ ದಾಖಲೆಗಳ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು, ನಗರ ಭೂ ಮಾಪನ ಶಾಖೆ, ನಜರ್‌ಬಾದ್, ಮೈಸೂರು ಇವರುಗಳು ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕಪನಿಗೌಡ ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ.
ಶ್ರೀರಾಂಪುರ ಸರ್ವೆ ನಂ. 148:1ಎ ರ ಬಾಬ್ತು 35 ಗುಂಟೆಗೆ ಸಂಬಂಧಿಸಿದಂತೆ 3 ಜನ ಸರ್ವೇಯರುಗಳು ಆಳತೆ ಮಾಡಿದ್ದು, ಒಬ್ಬರು ಸರಿಯಾಗಿಲ್ಲ ರದ್ದು ಪಡಿಸಬಹುದು ಎಂದು ವರದಿ ನೀಡಿದರು, ಇನ್ನೊಬ್ಬರು ಸರಿಯಾಗಿದೆ ಎಂದು ಮತ್ತೊಬ್ಬರು ಸರ್ವೇಯರ್ ಸರ್ವೆ ನಂಬರುಗಳು ಬೆರೆಸಿಕೊಂಡಿದೆ ಎಂದು ಆಳತೆ ವರದಿ ನೀಡಿದ್ದಾರೆ,ನನಗೆ ಸರಿಯಾದ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ಕಚೇರಿ ಮುಂದೆ
ಮಹದೇವಪುರ ಬಿ ಬ್ಲಾಕ್ ನಿವಾಸಿ ಕಪನಿ ಗೌಡ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ತಮಗೆ ನ್ಯಾಯ ಸಿಗುವವರೆಗೆ ಇಲ್ಲೇ ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.