ಮೈಸೂರು: ಪಿ ಜಿ ಆರ್ ಎಸ್ ಎಸ್ ಸಂಸ್ಥಾಪಕ ಅಧ್ಯಕ್ಷ ಯಾದವ್ ಹರೀಶ್ ಅವರು ತಮ್ಮ ಜನುಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಅವರು ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ನಿರಾಶ್ರಿತರ ಮತ್ತು ವೃದ್ಧರ ಬೃಂದಾವನದಲ್ಲಿ ಕೇಕ್ ಕತ್ತರಿಸಿ ಮೂಲಕ ಆಚರಣೆ ಮಾಡಿಕೊಂಡರು.

ನಂತರ ಅಲ್ಲಿದ್ದ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.ಈ ವೇಳೆ ಸಮೃದ್ಧಿ ಟ್ರಸ್ಟ್ ಸಂಸ್ಥಾಪಕರಾದ ಸಹನಗೌಡ, ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಪಿ ಜಿ ಆರ್ ಎಸ್ ಎಸ್ ನಿರ್ದೇಶಕರಾದ ಮಂಜುಳಾ ಮತ್ತು ಎಲ್ಲಾ ಹಿರಿಯ ತಾಯಂದಿರು ಮತ್ತು ಸ್ನೇಹಿತರು ಭಾಗವಹಿಸಿ ಯಾದವ್ ಹರೀಶ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.