ಶಂಕರ ಪುರದಲ್ಲಿ ವಿಶ್ವದ ಅತಿ ದುಬಾರಿ ಬೆಲೆಯ ಮಾವಿನಹಣ್ಣು ಬೆಳೆದ ರೈತ ಲೋಬೊ

Spread the love

ಉಡುಪಿ: ಉಡುಪಿ ಜಿಲ್ಲೆಯ ಶಂಕರ ಪುರದ ನಿವಾಸಿ, ಕೃಷಿ ಸಾಧಕ ಜೋಸೆಫ್ ಲೋಬೊ ಶಂಕರಪುರ ಅವರು ವಿಶ್ವ ಪ್ರಸಿದ್ದಯಾದ ಕೆಜಿಗೆ 2,74,000 ರೂ ಬೆಲೆಯ ಮಿಯಾಜಾಕಿ ಮಾವಿನ ಹಣ್ಣು ಬೆಳೆದು ಸುದ್ದಿಯಾಗಿದ್ದಾರೆ.

ಲೋಬೋ ಅವರ ಯಶಸ್ಸು ರಾಜ್ಯ ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ಅತಿ ಪರಿಶ್ರಮದಿಂದ ಲೋಬೊ ಅವರು ತಾರಸಿ ಮೇಲೆ ವಿಶ್ವದ ದುಬಾರಿ ಮಾವು ಮಾತ್ರವಲ್ಲದೆ ರಾಜ್ಯ ರಾಷ್ಟ್ರ ಹಾಗು ಅಂತರಾಷ್ಟ್ರೀಯ 400 ಕ್ಕಿಂತಲೂ ಅಧಿಕ ಜಾತಿಯ ಗಿಡಗಳನ್ನು ಬೆಳೆದು ಹಣ್ಣುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇವರ ಈ ಸಾಧನೆಗೆ ರಾಜ್ಯ ಸರ್ಕಾರದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇತರ ಸಂಘ ಸಂಸ್ಥೆಗಳಿಂದ ರಾಜ್ಯ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿ ಅತ್ಯುತ್ತಮ ಸಾವಯವ ಕೃಷಿಯ ಜೊತೆ ಹೈನುಗಾರಿಕೆ, ಜೇನು ಕೃಷಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಅಲ್ಲದೆ ಜೋಸೆಫ್ ಲೋಬೊ ಅವರು ಹಲವಾರು ಸಂಘ ಸಂಸ್ಥೆಗಳು ಹಾಗೂ ಶಾಲೆಗಳಿಗೆ ಕೃಷಿ ಮಾಹಿತಿಯನ್ನು ನೀಡುತ್ತಿದ್ದಾರೆ.ಲೋಬೊ ಅವರು ಮಡದಿ ನೀಮ ಹಾಗೂ ಮಗಳು ಜನಿಶರೊಂದಿಗೆ ಈ ಕೃಷಿಯನ್ನು ಮುನ್ನಡೆಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.