ಸೇನೆ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹಿರಿಯರು

Spread the love

ಮೈಸೂರು: ಮೈಸೂರಿನ
ಶ್ರೀ ಕೃಷ್ಣಮೂರ್ತಿಪುರಂ ಶ್ರೀ ರಾಮಮಂದಿರದಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಮ್ಮ ಭಾರತೀಯರ ಸಿಂಧೂರವನ್ನು ರಕ್ಷಿಸಲು ತಮ್ಮ ಜೀವ ಮತ್ತು ತಮ್ಮ ಕುಟುಂಬವನ್ನು ಲೆಕ್ಕಿಸದೆ ಆಪರೇಷನ್ ಸಿಂಧೂರ ಧರ್ಮ ಯುದ್ಧದಲ್ಲಿ ಭಾಗಿಗಳಾಗಿರುವ ಎಲ್ಲಾ ವೀರ ಯೋಧರಿಗೂ ದೈವಿಕ ಚೈತನ್ಯ, ಶಕ್ತಿ ಮತ್ತು ವೀರ ಜಯ ಸಿಗಲಿ ಎಂದು ಸ್ವಾಮಿ ಆಂಜನೇಯ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಧುರಾವ್, ಶೇಷಾದ್ರಿ, ವಿ.ಎನ್ ಕೃಷ್ಣ, ಪಿ ಕೆ ಶ್ರೀನಿವಾಸ, ನಂಜುಂಡಯ್ಯ, ಸುಬ್ಬು ಕೃಷ್ಣ, ಸತ್ಯನಾರಾಯಣ್ ಅಯ್ಯರ್, ಮಂಜುನಾಥ್, ಸಂತೋಷ್ ತರರು ಪೂಜೆಯಲ್ಲಿ ಭಾಗಿಯಾಗಿ ನಮ್ಮ ಸೈನಿಕರಿಗಾಗಿ ಪ್ರಾರ್ಥನೆ ಮಾಡಿದರು.