ಜಾನಪದ ಸಮ್ಮೇಳನ ಯಶಸ್ವಿಯಾಗಲಿ – ಡಾ ಎಲ್ ಹನುಮಂತಯ್ಯ.

Spread the love

ಬೆಂಗಳೂರು: ಬೆಂಗಳೂರಿನಲ್ಲಿ ಜುಲೈ 25 ರಂದು ನಡೆಯಲಿರುವ ರಾಜ್ಯ ಪ್ರಥಮ ಜಾನಪದ ಸಮ್ಮೇಳನದ ಲಾಂಛನವನ್ನು ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ನವರು ಬಿಡುಗಡೆ ಮಾಡಿದರು.

ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ಜುಲೈ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಜಾನಪದ ಸಮ್ಮೇಳನ ನಡೆಯಲಿದೆ.

ಈ ಸಮಾರಂಭದ ಲಾಂಛನವನ್ನು ಡಾ. ಎಲ್ ಹನುಮಂತಯ್ಯ ನವರು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಕನ್ನಡ ಜಾನಪದ ಪರಿಷತ್ತಿನ ಪ್ರಥಮ ರಾಜ್ಯ ಜಾನಪದ ಸಮ್ಮೇಳನ ಜನಪದ ಕಲಾವಿದರಿಗೆ ವಿದ್ವಾಂಸರಿಗೆ ಒಂದು ಹೊಸ ದಿಕ್ಸೂಚಿಯನ್ನು ನೀಡಲಿ ಮೂಲ ಕಲೆ ಮತ್ತು ಕಲಾವಿದರ ಸಂರಕ್ಷಣೆಗೆ ಹೊಸ ಹೆಜ್ಜೆ ಗುರುತಾಗಲಿ ಎಂದು ಈ ವೇಳೆ ಡಾ.ಎಲ್ ಹನುಮಂತಯ್ಯ ನವರು
ಸಮ್ಮೇಳನ ಯಶಸ್ಸಿಗೆ ಶುಭ ಹಾರೈಸಿದರು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ, ಗೋವಿಂದರಾಜ ನಗರ ಕನ್ನಡ ಜಾನಪದ ಪರಿಷತ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರ ನರಸಿಂಹ ಮೂರ್ತಿ, ರಾಮಾಂಜಿ, ಸದಾನಂದ ಎಂ, ಅಕ್ಬರ್ ಪಾಷಾ, ವಿಜಯಕುಮಾರ್, ನಾಗರಾಜ್, ಧನಲಕ್ಷ್ಮಿ, ಸುನಿಲ್ ಮುಂತಾದವರು ಉಪಸ್ಥಿತರಿದ್ದರು.