ಬೆಂಗಳೂರು: ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳ ಕಾರ್ಯಾಲಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ಕನ್ನಡ ಜಾನಪದ ಪರಿಷತ್ ಶೈಕ್ಷಣಿಕ ಚಟುವಟಿಕೆಗಳಿಗೆ ಒಡಂಬಡಿಕೆ ಮಾಡಿಕೊಂಡಿವೆ.

ಇದರ ಪ್ರತಿಯನ್ನು ಕುಲಪತಿಗಳು ಪ್ರೊ ಪರಶಿವಮೂರ್ತಿ ಹಾಗೂ ಕುಲಸಚಿವ ಡಾ ವಿಜಯ್ ಪೊನ್ನಚ್ಚ ಅವರು ಕನ್ನಡ ಜಾನಪದ ಪರಿಷತ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ
ಜಾನಪದ ಎಸ್ ಬಾಲಾಜಿ ಅವರಿಗೆ ನೀಡಿದರು.

ಡೀನ್ ಹಾಗೂ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ ಚಲುವರಾಜು,
ಶೈಕ್ಷಣಿಕ ನಿರ್ದೇಶಕ ಡಾ ಎಸ್ ವೈ ಸೋಮಶೇಖರ್, ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ, ರಾಮನಗರ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ ಉಪಸ್ಥಿತರಿದ್ದರು.
