ಮೈಸೂರು: ನಗರದ ವಿದ್ಯಾರಣ್ಯಪುರಂ ನಲ್ಲಿರುವ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಶನ್ ವತಿಯಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಹಮ್ಮಿಕೊಳ್ಳಲಾಯಿತು.
ಈ ವೇಳೆ ಆಚಾರ್ಯತ್ರಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ
ಅರ್ಚಕರು ಹಾಗೂ ಪುರೋಹಿತರಿಗೆ ಜೀವವಿಮಾ ಪಾಲಿಸಿಯ ಪತ್ರವನ್ನು
ಶಾಸಕ ಟಿ ಎಸ್ ಶ್ರೀವತ್ಸ ವಿತರಿಸಿದರು.
ಈ ವೇಳೆ ಮಾತನಾಡಿದ ಶ್ರೀವತ್ಸ ಅವರು,ಇಂತಹ ಕಾರ್ಯಕ್ರಮದಲ್ಲಿ ಸರ್ಕಾರದ ಸೌಲಭ್ಯ ತೆಗೆದುಕೊಳ್ಳುವಂತಹ ಕಾರ್ಯವು ಆಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಕಳೆದ ಅಧಿವೇಶನದಲ್ಲಿ ಅರ್ಚಕರ ಇನಾಂ ಜಮೀನಿಗೆ ಸಂಬಂಧಪಟ್ಟಂತೆ ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಇನಾಮ್ ಜಮೀನಿಗೆ ಅರ್ಜಿಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಪ್ರಶ್ನೆಯನ್ನು ಹಾಕಿದ್ದೆವು ಆದರೆ ಇಡೀ ಮೈಸೂರು ಜಿಲ್ಲೆಯಲ್ಲಿ ಇನಾಂ ಜಮೀನಿಗೆ ಸಂಬಂಧಪಟ್ಟಂತೆ ಅರ್ಚಕರ ಕಡೆಯಿಂದ ಒಂದೇ ಒಂದು ಸಿಂಗಲ್ ಅರ್ಜಿ ಹೋಗಿಲ್ಲ ಇದು ನನಗೆ ಬಹಳ ಅಚ್ಚರಿ ತಂದಿದೆ ಎಂದು ತಿಳಿಸಿದರು.
ಎಷ್ಟು ಜನರಿಗೆ ಇನಾಮ್ ಜಮೀನಿಗೆ ಅರ್ಜಿ ವಿತರಿಸಿದ್ದೀರಿ, ಏನು ಸೌಲಭ್ಯ ಕೊಟ್ಟಿದ್ದೀರಿ ಎಂಬ ಪ್ರಶ್ನೆಗಳನ್ನು ಎರಡನೆಯದಾಗಿ ಕೇಳಬೇಕೆಂದುಕೊಂಡಿದ್ದೆವು ಆದರೆ ಅರ್ಜಿಯೇ ಸಲ್ಲಿಕೆಯಾಗದಿರುವಾಗ ಮತ್ತೆ ಪ್ರಶ್ನೆ ಹೇಗೆ ಕೇಳುವುದು ಎಂದು ಹೇಳಿದರು.

ನಂತರ ಮುಜರಾಯಿ ಇಲಾಖೆಯ ಪರ್ಸನಲ್ ಸೆಕ್ರೆಟರಿ ಅವರ ಬಳಿಗೆ ಹೋಗಿ ಈ ಬಗ್ಗೆ ಕೇಳಿದ್ದೇನೆ ಅದಕ್ಕೆ ಅವರು ಮುಜರಾಯಿ ಇಲಾಖೆ ಕಂದಾಯ ಇಲಾಖೆ ಮುಖಾಂತರ ಅರ್ಜಿಯನ್ನು ಕರೆಯಲಾಗಿತ್ತು ಆದರೆ ಗಮನಿಸದೆ ಯಾರೂ ಅರ್ಜಿಯನ್ನೇ ಹಾಕಿಲ್ಲ ಎಂದು ಮಾಹಿತಿ ನೀಡಿದರು ಕೆಲವರು ತಮಗೆ ಇದು ಸಿಗುವುದಿಲ್ಲವೇನೋ ಎಂದುಕೊಂಡು ಸುಮ್ಮನಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರೆಂದು ಶ್ರೀವತ್ಸ ತಿಳಿಸಿದರು.
ಸರ್ಕಾರ ಅನೇಕ ಬಾರಿ ಸವಲತ್ತು ಕೊಡಬೇಕು ಎಂದು ಮನಸ್ಸು ಮಾಡಿ ಮುಂದೆ ಬಂದಾಗ ಹೀಗೆ ಗಮನಿಸದೆ ಎಡವಟ್ಟುಗಳು ಆಗುತ್ತದೆ ಆದರೂ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
20202ರ ಜನವರಿಯಿಂದ 2022ರ ಡಿಸೆಂಬರ್ ವರೆಗೆ ಒಂದು ವರ್ಷದವರಿಗೆ ಅರ್ಜಿ ಕರೆದಿದ್ದಾರೆ ಆದರೆ ಇದನ್ನು ಗಮನಿಸಿದೆ ಅರ್ಜಿಯನ್ನೇ ಹಾಕದಿರುವುದು ನಿಜಕ್ಕೂ ವಿಪರ್ಯಾಸ ಎಂದು ಶ್ರೀವತ್ಸ ಹೇಳಿದರು.
ಇತ್ತೀಚೆಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಅವರು ಜಗನ್ಮೋಹನ ಅರಮನೆಗೆ ಸಂಸ್ಕೃತ ಕಲಿತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೊಡುವ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಆ ಸಂದರ್ಭದಲ್ಲಿ ಅವರೊಂದಿಗೆ ಅರ್ಚಕ ವೃತ್ತಿ ಅರ್ಚಕರ ಬಗ್ಗೆ ಮಾತನಾಡಿದ್ದೇನೆ ಜೊತೆಗೆ ವಿಧಾನಸೌಧದಲ್ಲೂ ಖಾಸಗಿಯಾಗಿ ಅರ್ಚಕ ವೃತ್ತಿ ಮಾಡುವವರಿಗೆ ಐಡಿ ಕಾರ್ಡ್ ಕೊಟ್ಟರೆ ಬ್ಯಾಂಕುಗಳಲ್ಲಿ ಸಾಲ ಸಿಗಬಹುದೇನೋ ಎಂಬ ಕಾರಣಕ್ಕೆ ಖಾಸಗಿಯಾಗಿ ಅರ್ಚಕ ವೃತ್ತಿ ಮಾಡುವವರಿಗೆ ಐಡಿ ಕಾರ್ಡ್ ಕೊಡಿಸುವ ಕುರಿತು ಮಾತನಾಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ ರಾಮಪ್ರಸಾದ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮೀದೇವಿ, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ್ ಅರಸು, ಶಾಂತಕ್ಕ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್,
ಸಂಸ್ಥೆಯ ಗೌರವ ಅಧ್ಯಕ್ಷ ಲಕ್ಷ್ಮೀಶ, ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ರವಿಶಂಕರ್, ಖಜಾಂಚಿ ಮನೋಹರ್, ನಿರ್ದೇಶಕರುಗಳಾದ ರಾಜಣ್ಣ, ವಿಜಯ ವಿಠಲಾಚಾರ್ಯ, ಗುರುರಾಜ್, ಶರ್ಮಾ, ಪ್ರಸನ್ನ ಕುಮಾರ್, ವೇಣುಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.