ಮೈಸೂರು: ದೇಶದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ತತ್ವ ಸಿದ್ಧಾಂತಗಳ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದ ಆದಿ ಶಂಕರಾಚಾರ್ಯರು ಹಿಂದೂ ರಾಷ್ಟ್ರದ ಪ್ರಾತಃಸ್ಮರಣೀಯ ಆಚಾರ್ಯರು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು.
ನಗರದ ಅಗ್ರಹಾರದಲ್ಲಿ ಶುಕ್ರವಾರ ಅಭಿನವ ಶಂಕರ ನಿಲಯದ ಶಂಕರ ಮಠದಲ್ಲಿ ಶಂಕರಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ
ಶಂಕರ ರಥೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಪೂಜಿಸುವವನೆ ನಿಜವಾದ ಸನ್ಯಾಸಿಯಾಗುತ್ತಾನೆ ಅಂಥಹ ಮಹಾನ್ ಕಾರ್ಯವನ್ನು ಶಂಕರರು ಮಾಡಿದರು. ತಮ್ಮ 12ನೇ ವಯಸ್ಸಿನಲ್ಲಿಯೆ ಎಲ್ಲ ಶಾಸ್ತ್ರಗಳನ್ನು ಓದಿ ಕಾಲ್ನಡಿಗೆಯಲ್ಲಿಯೆ ದೇಶ ಸಂಚಾರ ಮಾಡಿ ಸಮಗ್ರ ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿದರು ಎಂದು ಶ್ರೀವತ್ಸ ತಿಳಿಸಿದರು.
ಅಗ್ರಹಾರದ ಶಂಕರ ಮಠದ ರಸ್ತೆಯಿಂದ ಪ್ರಾರಂಭಗೊಂಡ ಶಂಕರರ ರಥೋತ್ಸವ ರಾಮಾನುಜ ರಸ್ತೆ ಹಾಗೂ ಉತ್ತರಾದಿ ಮಠ ರಸ್ತೆಯಲ್ಲಿ ನಾದಸ್ವರದೊಂದಿಗೆ ಸಾಗಿ ಬಂದಿತು.
ನಂತರ ಪೂಜೆ, ಅಭಿಷೇಕ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ,ಮಠದ ವ್ಯವಸ್ಥಾಪ ಶೇಷಾದ್ರಿ ಭಟ್, ಮೂಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್, ಸಪ್ತಮಾತ್ರಿಕ ದೇವಸ್ಥಾನದ ಧರ್ಮಾಧಿಕಾರಿ ಭಾಸ್ಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮೈಸೂರು ಜಿಲ್ಲಾ ಪ್ರತಿನಿಧಿ ಡಿ.ಟಿ ಪ್ರಕಾಶ್, ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮಿದೇವಿ, ರಾಜ್ಯ ಉಪಾಧ್ಯಕ್ಷ ನo. ಶ್ರೀಕಂಠ ಕುಮಾರ್, ಎನ್ ಎಂ ನವೀನ್ ಕುಮಾರ್,
ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ನಿರ್ದೇಶಕ ಎಸ್ ರಂಗನಾಥ, ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಶ್ರೀಕಾಂತ ಕಶ್ಯಪ್, ರಾಜಕುಮಾರ್, ವಿಜಯ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.