ಸಂತ ರಾಮಾನುಜರು ಆಧ್ಯಾತ್ಮಿಕ ಸಮಾಜ ಸುಧಾರಕರು -ಹರೀಶ್ ಗೌಡ

ಮೈಸೂರು: ಶ್ರೀ ವೈಷ್ಣವ ಸಂತ ಶ್ರೀ ರಾಮಾನುಜಾಚಾರ್ಯರು ಆಧ್ಯಾತ್ಮಿಕ ಸಮಾಜ ಸುಧಾರಕರು ಎಂದು ಶಾಸಕ ಹರೀಶ್ ಗೌಡ ಬಣ್ಣಿಸಿದರು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ
ಪುಸ್ತಕ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ರಾಮಾನುಜಾ ಚಾರ್ಯರ ಜಯಂತಿಯಲ್ಲಿ ಶಾಸಕ ಹರೀಶ್ ಗೌಡರು ವಿಶೇಷ ಪೂಜೆಯಲ್ಲಿ ಭಾಗಿಯಾಗಿ
ಮಾತನಾಡಿದರು.

ರಾಮಾನುಜ ಚಾರ್ಯರು ಸುಮಾರು 1000 ವರ್ಷಗಳ ಹಿಂದೆಯೇ ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವಲ್ಲಿ ಯಶಸ್ವಿಯಾದರು ಮತ್ತು ಸಮಾಜದಲ್ಲಿ ದೊಡ್ಡ ಪರಿವರ್ತನೆಯನ್ನು ತಂದರು ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಸಂದರ್ಭದಲ್ಲಿ
ರಾಮಾನುಜಂ, ಸುದರ್ಶನ್ ವಿಜ್ಞೇಶ್ವರ ಭಟ್ ,ಸುರೇಂದ್ರ ನವೀನ್, ವಳ್ಳಿನಾದನ ,ಮಂಜುನಾಥ್ ರಾಜೇಂದ್ರ,ರವಿಚಂದ್ರನ ಮತ್ತಿತರರು ಭಾಗವಹಿಸಿದ್ದರು.