ಚಾಕಲೇಟ್ ನಿಂದ ಅರಳಿದ ಗಣಪತಿ

Spread the love

ಮೈಸೂರು: ಗೌರಿ,ಗಣೇಶ ಹಬ್ಬ ಬಂದಾಗೆಲ್ಲಾ ಅನೇಕ ಬಗೆಯ ಅತ್ಯಾಕರ್ಷಕ ಮೂರ್ತಿಗಳನ್ನು ತಯಾರಿಸುತ್ತಾರೆ ಅವು ಅದ್ಭುತವಾಗಿರುತ್ತವೆ,ಆದರೆ ಮೈಸೂರಿನಲ್ಲಿ ವಿಭಿನ್ನ ಗಣಪತಿಯನ್ನು ರೂಪಿಸಲಾಗಿದೆ.

ಇಲ್ಲಿ ಸಿದ್ದಪಡಿಸಿರುವ ಗಣಪ ಯಾಮ್ಮಿಯಾಗಿದ್ದಾನೆ ಇದರ ಸ್ವಾದ ಕೂಡಾ ಮಾಡಬಹುದು.ಇದು ಹೇಗೆ ಅಚ್ಚರೀನಾ ತಲೆ ಕೆಡಿಸಿಕೊಳ್ಳಬೇಡಿ.ಇವ ಚಾಕೊಲೇಟ್ ಗಣಪ!

ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಯಮ್ಮಿ ಜಂಕ್ಷನ್ ಬೇಕರಿಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ 40 ಕೆಜಿಯ ಚಾಕಲೇಟ್ ಬಳಸಿ ಗಣೇಶನನ್ನು ರೂಪಿಸಿ ಪ್ರತಿಷ್ಠಾಪಿಸಿರುವುದು ವಿಶೇಷ.ನೋಡಲು ಅತೀ ಸುಂದರ ಈ ಗಣಪ.

ಬುಧವಾರ ವಿಸರ್ಜನೆಯ ಸಮಯದಲ್ಲಿ ಚಾಕಲೇಟ್ ಗಣೇಶನನ್ನು ಹಾಲಿನಲ್ಲಿ ಮುಳುಗಿಸಿ ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ.

ಭಕ್ತರು ಈ ಚಾಕೊಲೇಟ್ ಗಣಪ ನೋಡಲು ನಾರಾಯಣ ಶಾಸ್ತ್ರಿ ರಸ್ತೆಯ ಯಮ್ಮಿ ಜಂಕ್ಷನ್ ಬೇಕರಿಗೆ ಬರಬೇಕಿದೆ.

ಈ ವಿಶೇಷ ಗಣೇಶನನ್ನು ಯಮ್ಮಿ ಜಂಕ್ಷನ್ ಮಾಲೀಕರಾದ ಚೈತ್ರ ಅವರು ತಯಾರಿಸಿದ್ದಾರೆ.

ಪ್ರಮೀಳಾ ಭರತ್ ಅವರು ಚಾಕೊಲೇಟ್ ಗಣೇಶನನ್ನು ತಯಾರಿಸಿದ ಯಮ್ಮಿ ಜಂಕ್ಷನ್ ಮಾಲೀಕರಾದ
ಚೈತ್ರ ರವರನ್ನು ಈ ವೇಳೆ ಅಭಿನಂದಿಸಿದರು.