ಟಿಪ್ಪರ್ ಹರಿದು ರೈತನ ಎರಡೂ ಕಾಲು ನಜ್ಜುಗುಜ್ಜು

Spread the love

ಮಂಡ್ಯ,ಮೇ.1: ಅರಳಿ ಮರದ ಕೆಳಗೆ ವಿಶ್ರಾಂತಿ ಪಡೆದಿದ್ದ ರೈತನ ಎರಡೂ ಕಾಲುಗಳ ಮೇಲೆ ಟಿಪ್ಪರ್ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್‌‌.ಪೇಟೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಆಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಪುಟ್ಟೇಗೌಡ ಎಂಬುವವರ ಎರಡು ಕಾಲುಗಳು‌ ನಜ್ಜುಗುಜ್ಜಾಗಿವೆ ಗಾಯವಾಗಿದೆ.

ಗ್ರಾಮಸ್ಥರು ಪುಟ್ಟೇಗೌಡರನ್ನು ಆಸ್ಪತ್ರೆಗೆ ದಾಖಲಿಸಿದ್ದು,ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.