ಮೈಸೂರು: ದೇಶ ದ್ರೋಹದ ಕೆಲಸ ಮಾಡಿದವರಿಗೆ ಕ್ರಮ ಅತ್ಯಗತ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಭಾರತ ದೇಶದಲ್ಲಿರುವ 140 ಕೋಟಿ ಜನರು ಬೇರೆ ದೇಶವನ್ನು ಸಪೋರ್ಟ್ ಮಾಡುವುದಿಲ್ಲ,ಒಂದು ವೇಳೆ ಯಾರಾದರೂ ಇದ್ದರೆ ಅಂತವರನ್ನು ಹುಡುಕಿ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿರುವುದು ಯಾರು ಎಂದು ನನಗೆ ಗೊತ್ತಿಲ್ಲ ಹಾಗೆ ಹೇಳಿದ್ದರೆ ಅದು ಖಂಡಿತ ತಪ್ಪು ಅದು ಯಾರೇ ಆಗಲಿ ನನ್ನ ತಮ್ಮನ ಆಗಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ದೇಶದ್ರೋಹದ ಕೆಲಸವನ್ನು ಯಾರೂ ಮಾಡಬಾರದು ನನ್ನ ಫ್ಯಾಮಿಲಿಯವರೇ ಆಗಲಿ ಮತ್ತೆ ಯಾರೇ ಆಗಲಿ ಅಂತವರನ್ನು ಹಿಡಿದು ಕ್ರಮ ತೆಗೆದುಕೊಳ್ಳುವ ಅತ್ಯಗತ್ಯವಿದೆ ನಾವು ಭಾರತೀಯರು ಯಾರು ಬೇರೆಯವರನ್ನು ಸಪೋರ್ಟ್ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವುದು, ಜೊತೆಗೆ ಫ್ಲಾಗ್ ಗಳನ್ನು ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುವುದು ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಸಂತೋಷ್ ಲಾಡ್ ಇದು ಎಲ್ಲಿ, ಯಾರು ಹಾಗೆ ಮಾಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ ಹಾಗೆ ಮಾಡಿದ್ದರೆ ಅದು ತಪ್ಪು, ಇಂತಹ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದೆ ಅಂತವರನ್ನು ಹಿಡಿದು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಅತ್ಯಾಚಾರದಂತಹ ಪ್ರಕರಣಗಳೇ ಆಗಲಿ, ದೇಶದ್ರೋಹದ ಪ್ರಕರಣಗಳೇ ಆಗಲಿ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.