ಮೈಸೂರು: ಜಾತ್ಯತೀತ ಸಮಾಜ ನಿರ್ಮಾಣದ ತತ್ವದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದರು ಎಂದು
ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ತಿಳಿಸಿದರು.
ಅಪೂರ್ವ ಸ್ನೇಹ ಬಳಗ ಹಾಗೂ ಕೃಷ್ಣರಾಜ ಯುವ ಬಳಗ ವತಿಯಿಂದ ನಂಜುಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷಯ ತೃತೀಯ ಹಾಗೂ ಬಸವೇಶ್ವರ ಜಯಂತಿ ಅಂಗವಾಗಿ ಗೋಪೂಜೆ ಹಾಗೂ ಗೋವುಗಳಿಗೆ ಮೇವು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರು ಸಮಾಜದ ಅಭಿವೃದ್ಧಿಗಾಗಿ ಹೋರಾಡಿದ್ದರು, ಸಮಾಜ ಹಾಗೂ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ನಾವೆಲ್ಲರೂ ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು, ಅವರ ಜೀವನವು ಸಮಾಜಕ್ಕೆ ಆದರ್ಶಪ್ರಾಯ ಎಂದು ಬಸವರಾಜ್ ಬಸಪ್ಪ ತಿಳಿಸಿದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಮಾತನಾಡಿ,ಅಕ್ಷಯ ತೃತೀಯದ ಈ ಶುಭ ದಿವಸ ನೀವು ದಾನ ಧರ್ಮ ಮಾಡಿ, ಇಷ್ಟಪಟ್ಟು ಶುಭ ಕೆಲಸ ಮಾಡಿದರೆ ಅದೆಲ್ಲಾ ಒಳ್ಳೆಯದಾಗುತ್ತದೆ ಒಳ್ಳೆಯದೇ ಮಾಡಿ ಅದರ ಪುಣ್ಯ ಅಕ್ಷಯವಾಗುತ್ತದೆ ಎಂದು ಸಲಹೆ ನೀಡಿದರು.
ಪರಮಾತ್ಮನು ನಿಮ್ಮ ಮನದ ಇಚ್ಛೆಗಳನ್ನು ಈಡೇರಿಸಲಿ ನಿಮ್ಮ ಕಷ್ಟ ಚಿಂತೆ ನೋವು ಕ್ಷಯವಾಗಲಿ ಸದಾ ಆನಂದ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಬದಲ್ಲಿ ದೂರ ರಾಜಣ್ಣ, ಜೆತ್ತಿಪ್ರಸಾದ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ದೇವರಾಜ್,ಜಗದೀಶ್, ಶಿವಲಿಂಗಸ್ವಾಮಿ,ಆನಂದ್ ಮತ್ತಿತರರು ಹಾಜರಿದ್ದರು.