ಮೈಸೂರು: ಲಯನ್ ಟಿ.ಹೆಚ್. ವೆಂಕಟೇಶ್ ಅವರಿಗೆ ಅಂತರರಾಷ್ಟ್ರೀಯ ಮೆಂಬರ್ ಶಿಪ್ ರಾಕ್ ಸ್ಟಾರ್ ಪ್ರಶಸ್ತಿ ಲಭಿಸಿದೆ.
ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ 317 G ಯ ಜಿ ಎಲ್ ಟಿ ಯ ಸಂಯೋಜಕರು ಮತ್ತು ಲಯನ್ಸ್ ಅಂಬಾಸಿಡರ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಇವರು 2023- 24ನೇ ವರ್ಷದಲ್ಲಿ ಲಯನ್ಸ್ ಜಿಲ್ಲೆ 317G ಗೆ 42 ಸದಸ್ಯರನ್ನು ಹೊಸ ಸದಸ್ಯರಾಗಿ ಸೇರ್ಪಡೆಗೊಳಿಸಿ ಅವರನ್ನು ಒಂದು ವರ್ಷದ ತನಕ ಅವರ ಸದಸ್ಯತ್ವವನ್ನು ಯಶಸ್ವಿಗೊಳಿಸಿರುವ ಕಾರ್ಯವನ್ನು ಮೆಚ್ಚಿ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯು ಮಿಷನ್ 1.5 ಅಂಗವಾಗಿ ನೀಡುವ ಮೆಂಬರ್ ಶಿಪ್ ರಾಕ್ ಸ್ಟಾರ್ ಪ್ರಶಸ್ತಿಯನ್ನು ನೀಡಿದೆ.

ಪ್ರಪಂಚದ 150 ಸಾಧಕರಲ್ಲಿ ಲಯನ್ ಟಿ.ಹೆಚ್. ವೆಂಕಟೇಶ್ ಸಾಧಕರಲ್ಲಿ ಒಬ್ಬರಾಗಿದ್ದಾರೆ.
ಇವರು ಕಳೆದ ವರ್ಷ ಲಯನ್ಸ್ ಅಂತಾರಾಷ್ಟ್ರೀಯ ಅಧ್ಯಕ್ಷ ಪದಕವನ್ನು ಸಹಾ ಪಡೆದಿದ್ದಾರೆ.
ಲಯನ್ಸ್ ಅಂಬಾಸಿಡರ್ ಸಂಸ್ಥೆಯ ಪರವಾಗಿ
ಟಿ.ಹೆಚ್. ವೆಂಕಟೇಶ್ ಅವರಿಗೆ
ಅಭಿನಂದನೆಗಳನ್ನು ಸಲ್ಲಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಲಯನ್ ಸಿ.ಆರ್ ದಿನೇಶ್ ತಿಳಿಸಿದ್ದಾರೆ.