ಜಾನಪದ ಬಳಸೋಣ, ಜಾನಪದ ಬೆಳೆಸೋಣ: ಮಹೇಶ ಎಸ್ ತಳವಾರ

Spread the love

ಧಾರವಾಡ: ಕನ್ನಡ ಜಾನಪದ ಪರಿಷತ್ ಅಂಗಸಂಸ್ಥೆ ಜಾನಪದ ಯುವ ಬ್ರಿಗೇಡ್ ನ ೫ ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮನೆ ಮನೆಯಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಜಾನಪದ ಯುವ ಬ್ರಿಗೇಡ್ ಧಾರವಾಡ ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕರಾದ ಮಹೇಶ ಎಸ್ ತಳವಾರ ಅವರ ನಿವಾಸದಲ್ಲಿ ಆಯೋಜನೆ ಮಾಡಲಾಗಿತ್ತು.

ಚೌಡಕಿ ನುಡಿಸುವುದರ ಮೂಖಾಂತರ ಗಣಕರಂಗ ಧಾರವಾಡದ ಸಂಸ್ಥಾಪಕರು ಮತ್ತು ಪ್ರಕಾಶಕರಾದ ಸಿದ್ಧರಾಮ ಹಿಪ್ಪರಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಧಾರವಾಡ ಜಿಲ್ಲಾ ಸಹ ಸಂಚಾಲಕ ರಾ‌.ಹ.ಕೊಂಡಕೇರ ಅವರು ಮಾತನಾಡಿದರು.

ಸುರೇಶ ಹಿರೆನ್ನವರ ಅವರು ಸ್ವಾಗತಿಸಿ,ಜಾನಪದ ಗೀತೆ ಹಾಡಿ ಎಲ್ಲರ ಮನ ಸೆಳೆದರು.

ಧಾರವಾಡ ಜಿಲ್ಲಾ ಸಂಚಾಲಕರಾದ ಮಹೇಶ ಎಸ್ ತಳವಾರ ಅವರು ಮಾತನಾಡಿ,ಎಲ್ಲರೂ ಜಾನಪದ ಬಳಸೋಣ, ಜಾನಪದ ಬೆಳೆಸೋಣ ಎಂದು ಕರೆ ನೀಡಿದರು. ನಂತರ
ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕುಂದಗೋಳ ತಾಲೂಕ ಸಂಚಾಲಕ ಮಾರುತಿ ಗೊಲ್ಲರ ಕಾರ್ಯಕ್ರಮ ನಿರ್ವಹಿಸಿ ಚೌಡಕಿ ಪದ ಹಾಡಿದರು.

ಈ ಸಂಧರ್ಭದಲ್ಲಿ ಧಾರವಾಡ ನಗರ ಸಹ ಸಂಚಾಲಕ ಪವನಕುಮಾರ ಪೂಜಾರ ಉಪಸ್ಥಿತರಿದ್ದರು. ರೈಲ್ವೆ ಸಿಬ್ಬಂದಿಗಳು, ರೈಲ್ವೆ ಕಾಲೋನಿ‌ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು.