ಮೈಸೂರು: ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ನಡೆದ ದುಶ್ಕೃತ್ಯವನ್ನು ಸಾಹಸಸಿಂಹ ವಿಷ್ಣು ಅಭಿಮಾನಿಗಳ ಒಕ್ಕೂಟ ಖಂಡನೆ ವ್ಯಕ್ತಪಡಿಸಿದೆ.
ಕಾಶ್ಮೀರದ ಪಹಲ್ಗಾಮ್ ಘಟನೆ
ಅಮಾನವೀಯವಾದುದು ಎಂದು ಒಕ್ಕೂಟದವರು ಕಿಡಿಕಾರಿದರು.
ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕ ಭಾರತೀಯರ ಸಾವಿಗೆ ಸಂತಾಪ ಸೂಚಿಸಲಾಯಿತು.
ವಿಷ್ಣು ಅಭಿಮಾನಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ನಗರದ ಉದ್ಬೂರಿನಲ್ಲಿರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಭಾರತದ ಧ್ವಜ ಹಿಡಿದು ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರಿಗೆ ಸಂತಾಪ ಸಲ್ಲಿಸಲಾಯಿತು
ಈ ವೇಳೆ ಮಾತನಾಡಿದ ವಿಷ್ಣು ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ. ಡಿ.ಪಾರ್ಥಸಾರಥಿ,
ಕಾಶ್ಮೀರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ನಟ ಫವಾದ್ ಖಾನ್ ನಟನೆಯ ಅಭಿರ್ ಗುಲಾಲ್ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು.
ನಮ್ಮ ಜಾತಿ ಮತಗಳು ನಮ್ಮ ಮನೆಗಳ ಒಳಗೆ ಸೀಮಿತವಾಗಿರಬೇಕು, ಮನೆಯಿಂದ ಹೊರ ಬಂದಮೇಲೆ ನಾವೆಲ್ಲ ಭಾರತೀಯರು, ನಾವೆಲ್ಲಾ ಒಂದೇ ಎಂಬ ಸಂದೇಶ ಇಡೀ ವಿಶ್ವಕ್ಕೆ ರವಾನಿಸಬೇಕಿದೆ ಎಂದು ಅವರು
ಹೇಳಿದರು.