ಮೈಸೂರು: ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ ಎಂದು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್ ವರ್ಣಿಸಿದರು.
ಕನ್ನಡ ಚಿತ್ರರಂಗದ ಕಣ್ಮಣಿ ಡಾ.ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ಉದ್ಯಾನವನದಲ್ಲಿ ಡಾ. ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವೇಳೆ ಅವರು ಮಾತನಾಡಿದರು.

ಡಾಕ್ಟರ್ ರಾಜಕುಮಾರ್ ಅವರು ನಟಿಸಿರುವ ಅಷ್ಟೂ ಚಿತ್ರಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿವೆ ಎಂದು ಹೇಳಿದರು.
ಡಾ. ರಾಜಕುಮಾರ್ ಬರೀ ನಟನೆಗೆ ಮಾತ್ರ ಸೀಮಿತವಾಗದೆ ಗಾಯನದಲ್ಲೂ ಸೈ ಎನಿಸಿಕೊಂಡ ಒಬ್ಬ ಕನ್ನಡದ ಮೇರು ನಟ ಎಂದು ಬಣ್ಣಿಸಿದರು.
ಈ ವೇಳೆ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಶಿವಣ್ಣ, ನಗರ ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಎನ್ ಆರ್ ನಾಗೇಶ್, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಸೇವಾದಳ ಕಾರ್ಯಧ್ಯಕ್ಷ ಮೋಹನ್, ರಮ್ಮನಹಳ್ಳಿ ಯುವ ಕಾಂಗ್ರೆಸ್ ಮುಖಂಡ ಸುರೇಶ್, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹಾದೇವಸ್ವಾಮಿ, ನಿತೀಶ್ ಗೌಡ, ಸೋಮು, ಮಂಜುನಾಥ್ ಉಪಸ್ಥಿತರಿದ್ದರು.